Site icon BosstvKannada

ಧಿಡೀರ್‌ ಆಸ್ಪತ್ರೆಗೆ ದಾಖಲಾದ ಟಾಲಿವುಡ್‌ ನಟ ವಿಜಯ್‌ ದೇವರಕೊಂಡ, ಆಗಿದ್ದೇನು?

ಟಾಲಿವುಡ್ ನಟ ವಿಜಯ್ ದೇವರಕೊಂಡ ದಿಢೀ‌ರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಜಯ್‌ ದೇವರಕೊಂಡ ‘ಕಿಂಗ್‌ಡಮ್’ ಚಿತ್ರದ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಚಾರದಲ್ಲಿ ಅವರು ನಿರತರಾಗಿರುವ ವೇಳೆಯೇ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದ ‘ಎಂಟರ್ಟೈನ್ಮಂಟ್ ಎಫ್ ಪೇಜ್‌ನಲ್ಲಿ ಹಾಕಿರುವ ಮಾಹಿತಿಯ ಪ್ರಕಾರ ದೇವರಕೊಂಡ ಅವರಿಗೆ ಡೆಂಗ್ಯೂ ಕಾಣಿಸಿಕೊಂಡಿದ್ದು, ಇದರಿಂದ ಅವರಿಗೆ ಜ್ವರ ಬಂದಿದೆ. ಈ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಆದರೆ ದೇವರಕೊಂಡ ಅವರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಅವರ ತಂಡದಿಂದ ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ.
ಸದ್ಯ ಕೇಳಿ ಬರುತ್ತಿರುವ ಪ್ರಕಾರ, ಇದೇ ಜುಲೈ 20 ರಂದು ಅವರು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸದ್ಯ ದೇವರಕೊಂಡ ಅವರ ಬಹುನಿರೀಕ್ಷಿತ ‘ಕಿಂಗ್‌ಡಮ್’ ಚಿತ್ರ ಇದೇ ಜುಲೈ 31 ರಂದು ರಿಲೀಸ್ ಆಗಲಿದೆ. ಈ ಚಿತ್ರವನ್ನು ಗೌತಮ್ ತಿನ್ನನುರಿ ಅವರು ನಿರ್ದೇಶನ ಮಾಡಿದ್ದಾರೆ.

Exit mobile version