ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದ್ದು, ಸಧ್ಯ ಕದನ ವಿರಾಮ ಘೋಷಣೆ ಮಾಡಲಾಗಿದೆ. ಇದರ ನಡುವೆ ಚಿನ್ನ ಖರೀದಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿತ್ತು. ಇದೀಗ ಚಿನ್ನದ ಬೆಲೆ ದಿಢೀರನೆ ಭಾರೀ ಇಳಿಕೆ ಕಂಡಿದ್ದು, ಚಿನ್ನ ಖರೀದಿದಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಭಾರತದಲ್ಲಿ ಚಿನ್ನದ ಬೆಲೆ ಸಖತ್ ಇಳಿಕೆ ಕಂಡಿದೆ. ಗ್ರಾಮ್ಗೆ ಬರೋಬ್ಬರಿ 165 ರೂಗಳಷ್ಟು ಬೆಲೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ ಬಹುತೇಕ 185 ರೂಗಳಷ್ಟು ಕಡಿಮೆ ಆಗಿದೆ. 10 ಗ್ರಾಮ್ ಸುಧ್ಧ ಚಿನ್ನದ ಬೆಲೆಯಲ್ಲಿ 3400 ರೂಗಳ ಇಳಿಕೆ ಆಗಿದೆ. 9,045 ರೂ ಇದ್ದ ಬೆಲೆ 8,880 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 88,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 96,880 ರುಪಾಯಿ ಆಗಿದೆ.
ಇದಲ್ಲದೇ ಚೀನಾದ ಸರಕುಗಳ ಆಮದು ಮೇಲೆ ಸುಂಕವನ್ನ ಅಮೆರಿಕ 90 ದಿನಗಳ ವರೆಗೆ ತೆರವು ಮಾಡಿದೆ. ಇದರಿಂದ ಹೂಡಿಕೆದಾರರು ಚಿನ್ನ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಸ್ಟಾಕ್ ಮಾರ್ಕೆಟ್ ಹೂಡಿಕೆ ಮಾಡುವಲ್ಲಿ ಹೂಡಿಕೆದಾರರು ಗಮನ ಹರಿಸಿದ್ದಾರೆ.
ಇನ್ನು ಬೆಳ್ಳಿಯ ಬೆಲೆ ಗ್ರಾಂಗೆ ಅಲ್ಪ ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 1.10 ಪೈಸೆ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿ ದರ 97.90 ರೂಗೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 979 ರೂಗೆ ಮತ್ತು 1 Kg ಬೆಳ್ಳಿದರ 97,900 ರೂ ಗೆ ಇಳಿಕೆಯಾಗಿದೆ.

