Site icon BosstvKannada

ಹಾರ್ಟ್‌ ಅಟ್ಯಾಕ್‌ ತಡೆಯೋಕೆ, ಈ ಎರಡು ಟೆಸ್ಟ್‌ ಮಾಡಿಸಿ

ನಿಮ್ಗೆ ಗೊತ್ತಿರೋ ಹಾಗೆ ಎಲ್ಲೆಡೆ ಬರೀ ಹಾರ್ಟ್‌ ಅಟ್ಯಾಕ್‌ನದ್ದೇ ಸುದ್ದಿ. ಕರ್ನಾಟಕದಲ್ಲಂತೂ ಕೆಮ್ಮು, ನೆಗಡಿಯಂತೆ ಹಾರ್ಟ್‌ ಅಟ್ಯಾಕ್‌ ಪ್ರಕರಣಗಳು ಕಾಣಿಸಿಕೊಳ್ತಿವೆ. ನಿಂತಲ್ಲೆ ಎದೆ ಹಿಡ್ಕೊಂಡು ಕುಸಿದುಬೀಳೋದು ಸರ್ವೇ ಸಾಮಾನ್ಯವಾಗಿದೆ. ಯಾವುದೇ ವಯಸ್ಸಿನ ಹಂಗಿಲ್ಲದೇ ಬರುವ ಈ ಹೃದಯಾಘಾತವನ್ನ ತಡೆಯಲು ಈ ಎರಡು ಬ್ಲಡ್‌ ಟೆಸ್ಟ್‌ಗಳು ಪ್ರಮುಖ ಪಾತ್ರ ವಹಿಸುತ್ವೆ.

ಹೋಮೋಸಿಸ್ಟೈನ್ ಅಂದ್ರೆ ರಕ್ತದಲ್ಲಿ ಕಂಡುಬರುವಂತಹ ಅಮೈನೋ ಆಮ್ಲ. ಇದು, ಪ್ರೋಟೀನ್‌ಗಳನ್ನು ತಯಾರಿಸಲು ಸಹಕಾರಿ. ಒಂದು ವೇಳೆ ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾದ್ರೆ ನೇರವಾಗಿ ಹೃದಯ ಮತ್ತು ರಕ್ತನಾಳಗಳ ಖಾಯಿಲೆಗೆ ಕಾರಣವಾಗುತ್ತೆ. ಅಷ್ಟೇ ಅಲ್ಲದೆ ಇದು ರಕ್ತದಲ್ಲಿ ಹೆಚ್ಚಾದರೆ ಹಾರ್ಟ್ ಅಟ್ಯಾಕ್ ಸಂಭವ ಕೂಡ ಹೆಚ್ಚು. ಆದ್ದರಿಂದ ಇದರ ಪರೀಕ್ಷೆ ಮಾಡಿದ್ರೆ ಹೃದಯಾಘಾತದ ಸಾಧ್ಯತೆ ಬಗ್ಗೆ ತಿಳಿದುಕೊಳ್ಳಬಹುದು.

ಇನ್ನು, ಎರಡ್ನೇದಾಗಿ ಸಿ ರಿಯಾಕ್ಟಿವ್ ಪ್ರೋಟೀನ್ ಪರೀಕ್ಷೆ. ನಮ್ಮ ಬಾಡಿಯಲ್ಲಿ ಸಿಆರ್‌ಪಿ ಮಟ್ಟ ಹೆಚ್ಚಾದಾಗ ಸಂಧಿವಾತ, ಹೃದಯ ಸಂಬಂಧಿ ಖಾಯಿಲೆಗಳು ಆಹ್ವಾನವಾಗುತ್ವೆ. ಸಿಆರ್‌ಪಿ ಮಟ್ಟ ಹೆಚ್ಚಿದ್ದಷ್ಟು ಹೃದಯಾಘಾತದ ಸಾಧ್ಯತೆ ಕೂಡ ಹೆಚ್ಚು. ಹೀಗಾಗಿ ಸಿ ರಿಯಾಕ್ಟಿವ್ ಪ್ರೋಟೀನ್ ಪರೀಕ್ಷೆ ಮಾಡಿಕೊಂಡರೂ ಕೂಡ ಹೃದಯಾಘಾತದ ಲಕ್ಷಣಗಳ ಬಗ್ಗೆ ಎಚ್ಚೆತ್ತುಕೊಳ್ಳಬಹುದು. ಈ ಪರೀಕ್ಷೆಗಳನ್ನ ಆದಷ್ಟು ಬೇಗ ಮಾಡಿಸಿ ಹೃದಯಾಘಾತದಿಂದ ಬಚಾವಾಗಿ.

Exit mobile version