ಉಡುಪಿ: ಮೂರು ಕಡೆಯಿಂದ ಸುತ್ತುವರೆದೂ ಮಹಿಳೆಯರಿಂದ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯ ಗ್ಯಾಂಗ್ ನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಿಯರು ಹೆಜಮಾಡಿಯ ಗರಡಿ ನೇಮೋತ್ಸವದಲ್ಲಿ ಮೂರು ಕಡೆ ಸುತ್ತುವರೆದು ವೃದ್ಧೆಯ ಚಿನ್ನ ಎಗಿರಿಸಿದ್ದರು. ತಮಿಳುನಾಡಿನ ಶೀಥಲ್, ಕಾಳಿಯಮ್ಮ, ಮಾರಿಯಮ್ಮ ಬಂಧಿತರು. ಇವರು ತಾವೇ ಗದ್ದಲ ಸೃಷ್ಟಿಸಿ ಕಳ್ಳತನ ಮಾಡುತ್ತಿದ್ದರು. ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಎಗರಿಸಿದ್ದರು.
ಕಳ್ಳಿಯರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಕಳ್ಳಿಯರನ್ನು ಬಂಧಿಸಿದ್ದಾರೆ.

