ಖ್ಯಾತ ಕಿರುತೆರೆ ನಟ ಮಡೆನೂರು ಮನು ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಕಾಮಿಡಿ ಕಿಲಾಡಿ ಶೋ ಮೂಲಕ ಮಿಂಚಿದ್ದ ಮಡೆನೂರು ಮನು (Madenur Manu) ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ! ವಿರುದ್ಧ ಕಿರುತೆರೆ ನಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಹಾಸನದ ಶಾಂತಿಗ್ರಾಮದ ಮಡೆನೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಆದ್ರೆ, ಮನು ಕೊಟ್ಟಿರುವ ಕಿರುಕುಳ ಒಂದೆರಡಲ್ಲ.

ಶಿವಮೊಗ್ಗ ಲಾಡ್ಜ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ.. ಪೇಮೆಂಟ್‌ ಕೊಡುವ ನೆಪದಲ್ಲಿ ಬಂದು ರೇಪ್‌ ಮಾಡಿದ್ದಾನೆ.. ಎರಡು ಬಾರಿ ಗರ್ಭಪಾತದ ಮಾತ್ರೆ ಕೊಟ್ಟಿದ್ದಾನೆ ಅಂತೆಲ್ಲಾ ಸಂತ್ರಸ್ತೆ ಆರೋಪಿಸಿದ್ದಾರೆ. ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಅಂತಾ ದೊಡ್ಡವರು ಸುಮ್ಮನೆ ಹೇಳಿಲ್ಲ ಬಿಡಿ. ಸಮಾಜದ ಮುಂದೆ ನಾನು ದೊಡ್ಡ ಸಾಚಾ, ನನ್ನ ಕಷ್ಟ ಕಣ್ಣೀರು ಅಂತ ಹೋದಲ್ಲಿ, ಬಂದಲ್ಲಿ ಊರು ತುಂಬಾ ಹೇಳಿಕೊಂಡು ಓಡ್ಡುತ್ತಿದ್ದ ಮಡೆನೂರು ಮನು ಕರಾಳ ಮುಖ ಈಗ ಬಯಲಾಗಿದೆ.

ಈ ಬಗ್ಗೆ ಸಂತ್ರಸ್ತೆ ಬಾಸ್‌ ಟಿವಿ ಜೊತೆ ಮಾತ ನಾಡಿದ್ದು,‌ ನನ್ನ ಮೇಲೆ ಅತ್ಯಾಚಾರ ಮಾಡಿ ಕಳೆದ 3 ವರ್ಷಗಳಿಂದ ಮನು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಳೆದ ಶ‌ನಿವಾರ ನನ್ನ ಮನೆಗೆ ಬಂದು ನನಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ನನಗೆ ಪ್ರಜ್ಞೆ ಇಲ್ಲದಂತಹ ವೇಳೆ ಏನೇನೋ ವಿಡಿಯೋ ಮಾಡಿ, ನನಗೆ ಸುಳ್ಳು ಹೇಳಿ ತಾಳಿ ಕಟ್ಟಿದ್ದಾನೆ. ಅತ್ಯಾಚಾರ ಮಾಡಿ ತಾಳಿ ಕಟ್ಟಿದ್ರೆ ನಾನು ಒಪ್ಪಲ್ಲ ಅಂದೆ.. ನಮ್ಮ ಅಪ್ಪನಿಗೂ ಇಬ್ಬರು ಹೆಂಡ್ತಿರು, ನನ್ನ ತಾತನಿಗೂ ಇಬ್ರು ಹೆಂಡ್ತೀರು. ನನಗೆ ನಿನ್ನನ್ನು ದೇವ್ರು ಕೊಟ್ಟಿರೋದು. ನಾನು ತಿಂಗಳಲ್ಲಿ ಆ ಮನೆಯಲ್ಲಿ 15 ದಿನ ನಿನ್ನ ಜೊತೆ 15 ದಿನ ಇರ್ತಿನಿ ಎಂದಿದ್ದ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ನನಗೆ ಎರಡು ಬಾರಿ ಗರ್ಭಪಾತ ಮಾಡಿಸಿದ್ದಾನೆ, ಮಗು ಬೇಕು ಅಂದ್ರೆ ಬಿಟ್ಟಿಲ್ಲ, ನನಗೆ ತಲೆಕೆಡಿಸಿ ಜೊತೆಗೆ ಇರುತ್ತೀನಿ ಅಂತ ಹೇಳಿ ಸಿನಿಮಾ ಸಿಕ್ಕ ಮೇಲೆ ಸ್ವಲ್ಪ ಬ್ಯುಸಿ ಇದ್ದೀನಿ ಅಂತ ಎರಡು ದಿನ ಮಾತ್ರ ಬರ್ತಿನಿ ಎಂದಿದ್ದ. ಅವನು ಸಿನಿಮಾಗಾಗಿ ಜಿಮ್ ಸೇರಿದಾಗ ನಾನು ಅವನಿಗೆ ಲಕ್ಷಾಂತರ ರೂಪಾಯಿ ಕೊಟ್ಟಿದ್ದೀನಿ. ಅವನಿಗೆ ಸಿನಿಮಾ ಸಿಕ್ಕ ನಂತ್ರ ಸಂಪೂರ್ಣ ಬದಲಾದ. ನಾನು ಹೀರೋ ಆಗಿ ಇನ್ನು ಐವತ್ತು ಸಿನಿಮಾ ಮಾಡಬೇಕು. ನನಗೆ ಮಗಳಿದ್ದಾಳೆ ನನ್ನ ಹೆಂಡ್ತಿ ಒಪ್ಪಲ್ಲ ಬ್ರೇಕ್ ಅಪ್ ಮಾಡ್ಕೋ ಅಂದ.. ನಾನು ಆಗಲ್ಲ ಅಂದಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದ. ನಾನು ಅವನಿಗೆ ಹೇಳಿನೇ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೊಟ್ಟೆ ಎಂದು ಸಂತ್ರಸ್ತೆ ಹೇಳಿದ್ದಾರೆ.

Also Read: Hassan: ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು

ಪ್ರಕರಣಕ್ಕೆ ಸಂಬಂಧಿಸಿದಂತೆ ಮಡೆನೂರು ಮನು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಸಂತ್ರಸ್ತೆ ಯಾವ ಹೀರೋ? ನಂಗಂತೂ ಯಾವ ಹೀರೋನೂ ಗೊತ್ತಿಲ್ಲ. ಅವನೇ ಹೇಳಬೇಕು, ಯಾವ ಹೀರೋ ಅಂತ.. ಅಷ್ಟಕ್ಕೂ ಅನ್ಯಾಯ ಆಗ್ತಿರೋದು ನನಗೆ, ಅವನಿಗಲ್ಲ. ಅವನ ವಿಷಯಕ್ಕೆ ನಾನು ಒತ್ತಡ ಮಾಡ್ಕೊಂಡು ಆರೋಗ್ಯ ಸಮಸ್ಯೆ ಆಗಿತ್ತು. ಒಂದು ತಿಂಗಳು ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ಕಳೆದ ಶನಿವಾರ ಇವನು ನನ್ನ ನೋಡಲು ಬಂದಾಗ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಒಟ್ನಲ್ಲಿ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆಯಾಗಲೇಬೇಕು. ಸದ್ಯ ಮಡೆನೂರು ಮನು ವಿರುದ್ಧ ಆರೋಪಗಳ ಸುರಿಮಳೆನೇ ಇದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡ್ಬೇಕು.
ಬ್ಯೂರೋ ರಿಪೋರ್ಟ್‌ ಬಾಸ್‌ ಟಿವಿ ಕನ್ನಡ.

Share.
Leave A Reply