Site icon BosstvKannada

ಕೆಜಿ ಕೆಜಿ ಚಿನ್ನ ದರೋಡಿ ಮಾಡಿದ ಖದೀಮರು

ಮೈಸೂರು: ದರೋಡೆಕೋರರ ಗ್ಯಾಂಗ್ ವೊಂದು ಕೆಜಿಗಟ್ಟಲೇ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

7 ಗನ್‌ ಬಳಸಿ 4 ನಿಮಿಷದಲ್ಲಿ ಹುಣಸೂರು ಚಿನ್ನದ ಅಂಗಡಿಯಲ್ಲಿ (Hunsuru Jewellery Shop Robbery)ಕೆಜಿ ಗಟ್ಟಲೇ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕೇವಲ ನಾಲ್ಕೇ ನಿಮಿಷಗಳಲ್ಲಿ ಖದೀಮರು ದೋಚಿ ಪರಾರಿಯಾಗಿದ್ದಾರೆ. ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಹುಣಸೂರು ಬಸ್ ನಿಲ್ದಾಣದ (Hunsur Bus Stand) ಹಿಂಭಾಗದಲ್ಲಿ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ʼ ಚಿನ್ನಂಗಡಿಯಲ್ಲೇ ಕಳ್ಳತನವಾಗಿದೆ. ಶೋಕೆಸ್‌ನಲ್ಲಿದ್ದ ದೊಡ್ಡ ದೊಡ್ಡ ಗಾತ್ರದ ಚಿನ್ನಾಭರಣವನ್ನ ಒಂದು ಕಡೆ ಗುಡ್ಡೆ ಹಾಕಿ ಚೀಲದಲ್ಲಿ ಹೊತ್ತುಕೊಂಡು ಹೋಗಿದ್ದಾರೆ.

5 ಜನ ದುಷ್ಕರ್ಮಿಗಳು ಚಿನ್ನ ದೋಚಿ ಪರಾರಿಯಾಗಿದ್ದಾರೆ. ಚಿನ್ನವನ್ನ ಒಬ್ಬ ಗುಡ್ಡೆ ಹಾಕುತ್ತಿದ್ದರೆ ಮತ್ತೊಬ್ಬ ಗನ್‌ ಹಿಡಿದು ಸಿಬ್ಬಂದಿ ಬೆದರಿಸುತ್ತಿದ್ದ. ಮತ್ತೊಬ್ಬ ಗನ್ ಹಿಡಿದು ಬಾಗಿಲ ಬಳಿ ನಿಂತಿದ್ದ. ಉಳಿದ ಇಬ್ಬರು ಹೊರಗಡೆ ದ್ವಿಚಕ್ರ ವಾಹನ ಸ್ಟಾರ್ಟ್ ಮಾಡಿಕೊಂಡು ನಿಂತಿದ್ದರು. ಗುಡ್ಡೆ ಹಾಕಿ ನಾಲ್ಕು ನಿಮಿಷಗಳಲ್ಲೇ ಕೆಜಿ ಚಿನ್ನವನ್ನು ಹೊತ್ತುಕೊಂಡು ಹೋಗಿದ್ದಾರೆ. ಅಂದಾಜು 4ರಿಂದ 5 ಕೋಟಿ ಮೌಲ್ಯದಷ್ಟು ಚಿನ್ನ-ವಜ್ರಾಭರಣ ದೋಚಿದ್ದಾರೆ. ಖದೀಮರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಬೈಕ್ ನಲ್ಲಿ ಇಬ್ಬರು, ಮತ್ತೊಂದು ಬೈಕ್‌ನಲ್ಲಿ ಮೂವರು ಹುಣಸೂರಿನಿಂದ ಕೆ.ಆರ್ ನಗರಕ್ಕೆ ಬೈಪಾಸ್ ರಸ್ತೆಯ ಮೂಲಕ ಹೋಗುತ್ತಿರುವ ವಿಡಿಯೋ ಕೂಡ ಸೆರೆಯಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version