ಬಿಜೆಪಿಗೆ ಧಮ್, ತಾಕತ್ತಿದ್ರೆ ರಾಜ್ಯಕ್ಕೆ ರಸಗೊಬ್ಬರ ಪೂರೈಸಲು ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಸಚಿವ ಚೆಲುವರಾಯಸ್ವಾಮಿ ಬಿಜೆಪಿಗೆ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ರಸಗೊಬ್ಬರ ಸಿಗದೇ ರೈತರ ಪರದಾಟ ಹಿನ್ನಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಡಿಸಿಗಳು ಕಾರ್ಯದರ್ಶಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೇಂದ್ರ ಸರ್ಕಾರವೇ ನಮಗೆ ಯೂರಿಯಾ ಒದಗಿಸುತ್ತದೆ. ಹೀಗಾಗಿ ನಾವು ಇದರಲ್ಲಿ ರಾಜಕೀಯ ಮಾಡಲು ಹೋಗಿರಲಿಲ್ಲ. ಬಿಜೆಪಿಗರು ರಾಜಕೀಯವಾಗಿ ಮಾತಾಡಿದರೆ ಏನು ಮಾಡಲು ಆಗಲ್ಲ,ಬಿಜೆಪಿಗರಿಗೆ ಕೇಂದ್ರದ ಬಳಿ ಹೋಗಿ ಹೇಳುವ ಧಮ್ ಇಲ್ಲ ಎಂದು ಕುಟುಕಿದರು.
ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ.ಕೊಪ್ಪಳದಲ್ಲೂ ಸಮಸ್ಯೆ ಇದೆ. ಅದರ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ರೈತರ ಸಮಸೆಗಳ ಮೇಲೆಯೂ ರಾಜಕಾರಣ ಮಾಡುತ್ತಾರೆ. ಇದಕ್ಕೆ ಏನು ಮಾಡಲು ಆಗಲ್ಲ. ರೈತರ ಪರನಾವು ಇದ್ದೇವೆ. ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾಕ್ಕಾಗಿ ಪ್ರಯತ್ನ ಮಾಡುತ್ತದ್ದೇವೆ. ಬಿಜೆಪಿಗೆ ತಾಕತ್ತಿದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಚಾಲೆಂಜ್ ಮಾಡಿದ್ದಾರೆ.
ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ ಕೊಪ್ಪಳದಲ್ಲೂ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ರೈತರ ಸಮಸ್ಯೆಗಳ ಮೇಲೆಯೂ ರಾಜಕಾರಣ ಮಾಡುತ್ತಾರೆ ಇದಕ್ಕೆ ಏನು ಮಾಡಲು ಆಗಲ್ಲ. ರೈತರ ಪರ ನಾವು ಇದ್ದೇವೆ. ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ. ಬಿಜೆಪಿಗೆ ಧಮ್ ತಾಕತ್ತಿದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಚಾಲೆಂಜ್ ಮಾಡಿದ್ದಾರೆ.

