Site icon BosstvKannada

ಕಾಲ್ತುಳಿತ ಪ್ರಕರಣ : ಸರ್ಕಾರ ಎಡವಿದ್ದನ್ನು ಒಪ್ಪಿಕೊಂಡ್ರಾ MBP?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಯಾರ ತಲೆದಂಡವೂ ಆಗುವುದಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (MBP) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಲ್ತುಳಿತ ಪ್ರಕರಣವನ್ನ ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಮುಖ್ಯಮಂತ್ರಿಯವರು ಈ ವಿಚಾರವಾಗಿ ಹಲವಾರು ಕಠಿಣ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಎಂದರು. ಇದು ಯಾರೀ ಊಹರ ಮಾಡದ ಅನಿರೀಕ್ಷಿತ ಘಟನೆ. ಪ್ರವಾಹದ ಮಾದರಿಯಲ್ಲಿ ಜನ ಆಗಮಿಸಿದ್ರಿಂದ ಈ ದುರ್ಘಟನೆಯಾಗಿದೆ ಎಂದು ಹೇಳಿದ್ರು.

ಇನ್ನು ಉತ್ತರ ಪ್ರದೇಶದಲ್ಲಿ 129 ಮಂದಿ ಜೀವ ಕಳೆದುಕೊಂಡರು.ಇಂತಹ ಘಟನೆಗಳು ನೋವಿನ ಸಂಗತಿ. ಕುಟುಂಬದವರನ್ನು ಕಳೆದುಕೊಂಡ ನೋವಿನಲ್ಲಿ ಸರ್ಕಾರವೂ ಭಾಗಿಯಾಗಿದೆ ಎಂದರು. ಕಾಲ್ತುಳಿತದಲ್ಲಿ ಲೋಪಗಳಾಗಿವೆ.. ಎಲ್ಲಿ ಆಗಿವೆ, ಯಾರು ಹೊಣೆ ಎಂಬುವುದರ ಬಗ್ಗೆ ಸಿಐಡಿ ಸೇರಿದಂತೆ ಹಲವು ರೀತಿಯ ತನಿಖೆಗಳಾಗುತ್ತಿವೆ. ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದರು.

ಇನ್ನು ವಿಧಾನಪರಿಷತ್‌ ಸದಸ್ಯರ ನೇಮಕಾತಿಗೆ ಸಂಬಂಧಪಟ್ಟಂತೆ ಚರ್ಚೆ ಮಾಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್‌ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ಪೈಪೋಟಿಯೂ ಸಹಜ. ಹೀಗಾಗಿ ವಿಧಾನ ಪರಿಷತ್‌ ನಾಮ ನಿರ್ದೇಶನದ ಪಟ್ಟಿ ಬಗ್ಗೆ ಚರ್ಚೆ ಮಾಡಲು ಹೈಕಮಾಂಡ್‌ ಸಿಎಂ ಹಾಗೂ ಡಿಸಿಎಂ ಅವರನ್ನ ದೆಹಲಿಗೆ ಕರೆಸಿಕೊಂಡಿರಬಹುದು.

ಆದ್ರೆ ಇದ್ರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ರು. ಉಳಿದಂತೆ ಸಚಿವ ಸಂಪುಟ ಪುನರ್ ರಚನೆ ಹಾಗೂ ಇತರ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದರು.

Exit mobile version