Site icon BosstvKannada

ಮುಖದ ಮೇಲಿನ ಕಲೆಗಳಿಗೆ ನಿಮ್ಮ ಅಡುಗೆ ಮನೆಯಲ್ಲಿದೆ ಪರಿಹಾರ..!

ಮುಖದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಕಲೆಗಳಿಗೆ ಬಂಗು ಅಥವಾ ಪಿಗ್‌ಮೆಂಟೇಷನ್‌ ಅಂತಾ ಕರೀತಾರೆ. ಈ ರೀತಿ ಕಲೆಗಳು ಕಾಣಿಸಿಕೊಳ್ಳಲು ಕಾರಣ ಹಾರ್ಮೋನಲ್‌ ಇಂಬ್ಯಾಲೆನ್ಸ್.‌ ನಿಮ್ಮ ಅಡುಗೆಮನೆಯಲ್ಲಿರುವ ಕೆಲ ಸಾಮಾಗ್ರಿಗಳ ಬಳಕೆಯಿಂದ ಈ ಬಂಗನ್ನ ಸುಲಭವಾಗಿ ನಿವಾರಿಸಬಹುದು. ಅದು ಯಾವ್ಯಾವುದು ಅಂತಾ ನೋಡ್ತಾ ಹೋಗೋಣ.

ಬಂಗಿನ ನಿವಾರಣೆಗೆ ಆಲೂಗಡ್ಡೆ ಉತ್ತಮ ಪರಿಹಾರವಾಗಿದೆ. ಆಲೂಗಡ್ಡೆ ರಸ ಬ್ಲೀಚಿಂಗ್‌ ಪ್ರಾಪರ್ಟಿಯನ್ನ ಹೊಂದಿದ್ದು, ಇದು ಬಂಗಿನ ಬಣ್ಣವನ್ನ ತಿಳಿಗೊಳಿಸುವ ಕೆಲಸ ಮಾಡುತ್ತೆ. ಇನ್ನು ಮೊಡವೆ ಕಲೆಗಳ ನಿವಾರಣೆಗೆ ಕಸ್ತೂರಿ ಅರಿಶಿನ ಅದ್ಭುತವಾಗಿ ಕೆಲಸ ಮಾಡುತ್ತೆ. ಇದು ಮೊಡವೆ ಕಲೆಗಳನ್ನ ಹೋಗಲಾಡಿಸೋದಲ್ಲದೇ ತ್ವಚೆಯ ಮೃದತ್ವವನ್ನೂ ಹೆಚ್ಚಿಸುತ್ತೆ.

Read Also : ಹೆಚ್ಚು ಉಪ್ಪಿನ ಸೇವನೆ, ಸಮಸ್ಯೆಗಳ ಸರಮಾಲೆ..!

ಇನ್ನು, ಕಡಲೆ ಹಿಟ್ಟು. ಇದ್ರಲ್ಲಿ ಆಂಟಿ ಬ್ಯಾಕ್ಟೀರಿಯಲ್‌ ಪ್ರಾಪರ್ಟಸ್‌ ಇದೆ. ಚರ್ಮದ ಕಾಂತಿ ಹೆಚ್ಚಿಸೋದ್ರ ಜೊತೆಗೆ ಪಿಗ್‌ಮೆಂಟೇಷನ್‌ ಕಡಿಮೆ ಮಾಡುವಲ್ಲಿ ಕಡಲೆಹಿಟ್ಟು ನೆರವಾಗುತ್ತೆ. ಹೀಗಾಗಿ ಈ ಮೂರರ ಮಿಶ್ರಣ ನಿಮ್ಮ ಬಂಗಿನ ಸಮಸ್ಯೆಗೆ ಬೆಸ್ಟ್‌ ಫೇಸ್‌ಪ್ಯಾಕ್‌ ಆಗಿದೆ. ಒಂದು ಚಮಚ ಕಡಲೆಹಿಟ್ಟಿಗೆ ಕಾಲು ಚಮಚ ಕಸ್ತೂರಿ ಅರಿಶಿನ, ಅರ್ಧ ಚಮಚ ಆಲೂಗಡ್ಡೆ ರಸ ಹಾಗಿ ಮಿಶ್ರಣ ತಯಾರಿಸಿ. ಇದನ್ನ ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡ್ಬಹುದು.

Exit mobile version