Site icon BosstvKannada

ಭಾರತೀಯರ ಆರ್ಭಟಕ್ಕೆ ಶತ್ರುಗಳ ದಾಖಲೆ ಉಡೀಸ್..! ಯಾವ ದಾಖಲೆ? ಅಬ್ಬರಿಸಿದ್ದು ಯಾರು?

ಟಿ20 ಕ್ರಿಕೆಟ್​ನಲ್ಲಿ ಭಾರತೀಯ ಆಟಗಾರರು ಭರ್ಜರಿ ದಾಖಲೆಯೊಂದನ್ನು ಬರೆದಿದ್ದಾರೆ. ಶತ್ರು ತಂಡ ಪಾಕಿಸ್ತಾನ್‌ದ ದಾಖಲೆ ಮುರಿಯುವುದರ ಮೂಲಕ ಭಾರತೀಯ ತಂಡ (Team India) ಹೊಸ ದಾಖಲೆ ಬರೆದಿದೆ.

ರಾಯ್​ಪುರ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 208 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನತ್ತಿದ ಭಾರತ ತಂಡ, ಉತ್ತಮ ಆರಂಭ ಪಡೆದಿರಲಿಲ್ಲ. ಮೊದಲ ಎರಡು ಓವರ್ ಗಳಲ್ಲೇ ಎರಡು ವಿಕೆಟ್ ಗಳನ್ನು ಭಾರತ ತಂಡ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆ ವೇಳೆ ಮೈದಾನಕ್ಕೆ ಬಂದ ಇಶಾನ್ ಕಿಶನ್ 32 ಎಸೆತಗಳಲ್ಲಿ 11 ಫೋರ್ ಹಾಗೂ 4 ಸಿಕ್ಸರ್​ಗಳೊಂದಿಗೆ 76 ರನ್ ಗಳಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಇಶಾನ್ ಕಿಶಾನ್ ಔಟ್ ಆಗುತ್ತಿದ್ದಂತೆ ಆರ್ಭಟ ಆರಂಭಿಸಿದ ನಾಯಕ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 82 ರನ್ ಗಳಿಸಿ, ಗೆಲುವಿನ ಗುರಿ ಮುಟ್ಟಿದ್ದರು. ಇಬ್ಬರ ಈ ಸ್ಫೋಟಕ ಅರ್ಧಶತಕದ ಪರಿಣಾಮ ಭಾರತ ತಂಡವು, 15.2 ಓವರ್​ಗಳಲ್ಲಿ 209 ರನ್​ಗಳಿಸಿ 7 ವಿಕೆಟ್​ಗಳ ಅಮೋಘ ಗೆಲುವು ಕಂಡಿತು.

ಈ ಗೆಲುವಿನೊಂದಿಗೆ ಭಾರತ ತಂಡವು ಹೊಸ ವಿಶ್ವ ದಾಖಲೆ ಬರೆದಿದೆ. ಅತ್ಯಧಿಕ ಎಸೆತಗಳನ್ನು ಬಾಕಿಯಿರಿಸುವ ಮೂಲಕ ಗೆದ್ದು ದಾಖಲೆ ಬರೆದಿರುವುದು ವಿಶೇಷ. ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ಎಸೆತಗಳನ್ನು ಬಾಕಿಯಿರಿಸಿ 200+ ರನ್ ಚೇಸ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ ತಂಡ 24 ಎಸೆತಗಳನ್ನು ಬಾಕಿಯಿಸಿ 205 ರನ್​ ಗಳ ಚೇಸಿಂಗ್ ಮಾಡಿತ್ತು.

ಈಗ ಭಾರತ ತಂಡವು ನ್ಯೂಜಿಲೆಂಡ್ ನೀಡಿದ್ದ 209 ರನ್​ಗಳ ಗುರಿಯನ್ನು 28 ಎಸೆತಗಳನ್ನು ಬಾಕಿಯಿರಿಸಿ ಚೇಸ್ ಮಾಡಿ ಗೆದ್ದಿದೆ. ಇದು ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಧಿಕ ಎಸೆತಗಳನ್ನು ಬಾಕಿಯಿರಿಸಿ 200+ ಸ್ಕೋರ್​ ಬೆನ್ನತ್ತಿ ಗೆದ್ದ ತಂಡ ಎಂಬ ವಿಶ್ವ ದಾಖಲೆಯಾಗಿದೆ. ಈ ದಾಖಲೆ ಭಾರತದಿಂದ ಮೂಡಿದ್ದಕ್ಕೆ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

Exit mobile version