ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ.. 2025ರ ಮೋಸ್ಟ್ ಎಕ್ಸೈಟೆಡ್ ಅಂಡ್ ಅವೈಟೆಡ್ ಫಿಲಂ.. ದಿ ಡೆವಿಲ್ ರಿಲೀಸ್‌ಗೆ ಸಜ್ಜಾಗಿ ನಿಂತಿದೆ. ಇದೇ ಡಿಸೆಂಬರ್ 11, ಗುರುವಾರದಂದು ರಾಜ್ಯಾದ್ಯಂತ ಡೆವಿಲ್ ದರ್ಶನವಾಗಲಿದೆ.. 2023ರ ಕಾಟೇರ ಸಿನಿಮಾ ಬಳಿಕ ಬರೋಬ್ಬರಿ 2 ವರ್ಷಗಳ ಬಳಿಕ ಡಿ ಬಾಸ್ ತೆರೆ ಮೇಲೆ ರಾರಾಜಿಸಲಿದ್ದಾರೆ.. ಆದ್ರೆ ವಿಷಯ ಏನಂದ್ರೆ ಇದೇ ಡೆವಿಲ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಸಿನಿಮಾ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿಸಿದೆ.. ಇದ್ರ ಜೊತೆಗೆ ದರ್ಶನ್‌ನ ಇನ್ನೊಂದು ಮುಖವನ್ನ ಅನಾವರಣಗೊಳಿಸಿದೆ.
ಡೆವಿಲ್ ಸಿನಿಮಾದ ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವ್ಯೂವ್ಸ್ ಪಡೆದು ಮುನ್ನುಗ್ಗುತ್ತಿದೆ.. ಅಭಿಮಾನಿಗಳಂತೂ ದರ್ಶನ್ ಝಲಕ್ ನೋಡಿ ಕುಣಿದು ಕುಪ್ಪಳಿಸ್ತಿದ್ದಾರೆ.. ಎರಡೇ ನಿಮಿಷದ ಟ್ರೈಲರ್ ಇಡೀ ಸಿನಿಮಾ ವೈಭವವನ್ನ ತೆರೆದಿಟ್ಟಿದೆ.. ಅಚ್ಯುತ್ ರಾಮ್, ರಮೇಶ್ ಇಂದಿರಾ, ವಿನಯ್ ಗೌಡ ಖಡಕ್ ವಿಲನ್‌ಗಳಾಗಿ ಅಬ್ಬರಿಸಿದ್ದಾರೆ.. ಇಂತಹ ವಿಲನ್‌ಗಳಿಗೆ ಟಕ್ಕರ್ ಕೊಡಲು ಧನುಷ್ ಅಲಿಯಾಸ್ ಡೆವಿಲ್ ಪಾತ್ರದಲ್ಲಿ ದರ್ಶನ್ ಚಿಂದಿ ಉಡಾಯಿಸಿದ್ದಾರೆ.. ದರ್ಶನ್ ಹೊಸ ಖದರ್, ಮಾಸ್ ಡೈಲಾಗ್‌ಗಳ ಮೂಲಕ ಡೆವಿಲ್ ಟ್ರೇಲರ್ ಸುನಾಮಿ ಎಬ್ಬಿಸುತ್ತಿದೆ. ಕ್ಷಣಕ್ಕೊಂದು ರೂಪ ತಾಳಿ ಹೀರೋಯಿನ್ ರಚನಾ ರೈಗೆ ಫುಲ್ ಕನ್‌ಫ್ಯೂಸ್ ಮಾಡಿದ್ದಲ್ದೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ.. ಲುಕ್‌ನಲ್ಲಿ ಹೀರೋ ತರ ಕಾಣಿಸಿಕೊಂಡ್ರೆ.. ಕಿಕ್‌ನಲ್ಲಿ ಟೆರರ್ ರೀತಿ ಗರ್ಜಿಸಿದ್ದಾರೆ. ಇದೆಲ್ಲದರ ಮಧ್ಯೆ ಬಿಗ್‌ಬಾಸ್‌ನಲ್ಲಿ ಅಬ್ಬರಿಸುತ್ತಿರುವ ಗಿಲ್ಲಿ ನಟ, ಡೆವಿಲ್‌ನಲ್ಲಿ ಮತ್ತೊಂದು ರೀತಿಯಲ್ಲಿ ಮಿಂಚಿದ್ದಾರೆ. ಪೊಲೀಸ್ ಸ್ಟೇಷನ್‌ನಲ್ಲಿ ಕುಳಿತು, ಎಕ್ಸ್‌ಕ್ಲೂಸ್ ಮೀ ಪಿಸಿ ಸ್ವಲ್ಪ ಎಸಿ ಹಾಕಮ್ಮ ಅಂತಾ ಖಡಕ್ ಡೈಲಾಗ್ ಹೊಡೆದಿದ್ದು, ಸಖತ್ ವೈರಲ್ ಆಗುತ್ತಿದೆ.

ಈ ಟ್ರೈಲರ್ ನೋಡಿದ್ರೆ ಇದೊಂದು ಪಕ್ಕಾ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಅನ್ನೋದು ಕನ್ಫರ್ಮ್ ಆಗಿದೆ.. ಇದರ BGM ಸಿನಿಮಾದ ನಿಗೂಢತೆಯನ್ನು ಎತ್ತಿ ತೋರಿಸಿದೆ.. ದರ್ಶನ್ ಒಂದ್ಕಡೆ ಹೈಕ್ಲಾಸ್ ಡಾನ್ ರೀತಿ ಕಾಣಿಸಿಕೊಂಡ್ರೆ.. ಮತ್ತೊಂದ್ಕಡೆ ರಾಜಕಾರಣಿ ತರ ಕಾಣಿಸಿಕೊಂಡಿದ್ದಾರೆ.. ಪಬ್, ಡ್ಯಾನ್ಸರ್ಸ್, ಪೊಲಿಟಿಕಲ್ ವಾರ್, ಸಡನ್ ಟ್ವಿಸ್ಟ್ ಎಲ್ಲವನ್ನ ನೋಡಿದ್ರೆ ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನ ಅನ್ನೋದ್ರಲ್ಲಿ ಡೌಟೇ ಇಲ್ಲ.. ಟ್ರೈಲರ್‌ನ ಕೊನೆಯಲ್ಲಿ ʻಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಇಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನಾʼ ಅಂತ ದರ್ಶನ್ ಡೈಲಾಗ್ ಹೊಡೆದಿದ್ದು.. ಅವರು ಜೈಲಿನಿಂದಲೇ ಹೊರಬರೋದಕ್ಕೆ ಹಿಂಟ್ ಕೊಟ್ಟಿದ್ದಾರೆ ಅಂತ ಹಲವರು ವಿಶ್ಲೇಷಣೆ ಮಾಡ್ತಿದ್ದಾರೆ.