BosstvKannada

Terrorist Abdul Rauf Azhar : ಕಂದಹಾರ್‌ ಹೈಜಾಕ್‌ ಮಾಸ್ಟರ್‌ ಮೈಂಡ್‌ ಮಟಾಶ್‌!

ಭಾರತದ 26 ನಾಗರಿಕರನ್ನ(Pahalgam Terror Attack) ಕೊಂದ ಭಯೋತ್ಪಾದಕರಿಗೆ ಸದ್ಯ ಭಾರತ ಸರ್ಕಾರ ತಕ್ಕ ಪಾಠ ಕಲಿಸಿ ಪ್ರತೀಕಾರ ತೀರಿಸಿಕೊಂಡಿದೆ. ಭಾರತದ ಒಂದೇ ಒಂದು ದಾಳಿಗೆ ಪಾಕ್‌ ವಿಲವಿಲ ಒದ್ದಾಡುವಂತಾಗಿದೆ.. ಕ್ಷಣ ಕ್ಷಣಕ್ಕೂ ಪಾಕಿಗಳಲ್ಲಿ ನಡುಕ ಶುರುವಾಗಿದೆ.. ಇಲ್ಲಿವರೆಗೂ ಉಗ್ರರು ನಡೆಸಿದ್ದ ಪ್ರತಿಯೊಂದು ಅಟ್ಯಾಕ್‌ಗೆ ಭಾರತ ಈಗ ಒಂದೇ ಸಲ ಉತ್ತರಿಸಿದೆ.. ಭಾರತೀಯ ಸೈನಿಕರಿಂದ ನಿನ್ನೆ ನಡೆದ ಆಪರೇಷನ್‌ ಸಿಂದೂರ್‌ (Operation Sindoor) ದಾಳಿಗೆ ಉಗ್ರರ 21 ಅಡಗುತಾಣಗಳನ್ನ ಒಮ್ಮೆಲೆ ಉಡೀಸ್‌ ಮಾಡಲಾಗಿದೆ..

ಇದ್ರಲ್ಲಿ 1999 ರಲ್ಲಿ ಕಂದಹಾರ್‌ನಲ್ಲಿ ನಡೆದ ಇಂಡಿಯನ್ ಏರ್‌ಲೈನ್ಸ್ ಐಸಿ 814 ಹೈಜಾಕ್‌ನ ಮಾಸ್ಟರ್‌ಮೈಂಡ್ ಆಗಿದ್ದ ಮೋಸ್ಟ್ ವಾಂಟೆಡ್ ಟೆರರ್‌ರಿಸ್ಟ್‌ ಅಬ್ದುಲ್ ರೌಫ್ ಅಜರ್ ಕೂಡ ಮಟಾಶ್‌ ಆಗಿದ್ದಾನೆ..

ಈತ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌(Masood Azhar)ನ ಕಿರಿಯ ಸಹೋದರನಾಗಿದ್ದಾನೆ.. ನಿನ್ನೆ ನಡೆದ ದಾಳಿಯಲ್ಲಿ ಮಸೂದ್ ಅಜರ್‌ನ ಕುಟುಂಬ ಸರ್ವನಾಶವಾಗಿದ್ದು, ಅದ್ರಲ್ಲಿ ಅಬ್ದುಲ್ ರೌಫ್ ಅಜರ್(Abdul Rauf Azhar) ಕೂಡ ಒಬ್ಬನಾಗಿದ್ದಾನೆ. IC 814 ಅಪಹರಣದಲ್ಲಿ, 190 ಜನರನ್ನು ಹೊತ್ತು ಕಠ್ಮಂಡುವಿನಿಂದ ದೆಹಲಿಗೆ ಹಾರುತ್ತಿದ್ದ ಇಂಡಿಯಾ ಏರ್ಲೈನ್ಸ್ ವಿಮಾನವನ್ನು ಕಂದಹಾರ್‌(Kandahar)ಗೆ ಕೊಂಡೊಯ್ದಿದ್ದ..

ಈ ಹೈಜಾಕ್‌ನ ಉದ್ದೇಶವೆನಾಗಿತ್ತು ಅನ್ನೊದಾದ್ರೆ, ಅಬ್ದುಲ್ ರೌಫ್ ಅಜರ್ ಸಹೋದರನಾದ ಮಸೂದ್ ಅಜರ್‌ನನ್ನ NIA ಬಂಧಿಸಿತ್ತು.. ಅಣ್ಣನ ಬಿಡುಗಡೆಗೆ ಅಬ್ದುಲ್ ರೌಫ್ ಅಜರ್ ಕಂದಹಾರ ಹೈಜಾಕ್‌ (Kandahar Hijack)ನಡೆಸಿದ್ದ. ಬಳಿಕ ಪಠಾಣ್‌ಕೋಟ್‌ನಲ್ಲಿ ನಡೆದ ಟೆರರ್‌ ಅಟ್ಯಾಕ್‌ ಮತ್ತು 2001 ರ ಸಂಸತ್ತಿನ ಮೇಲಿನ ದಾಳಿ, 2019 ರ ಪುಲ್ವಾಮಾ ಅಟ್ಯಾಕ್‌(Pulwama Attack) ನಲ್ಲೂ ಈತನೇ ಮಾಸ್ಟರ್‌ ಮೈಂಡ್‌ ಆಗಿದ್ದ.

Also Read : ಇನ್ನೂ ಆಪರೇಷನ್‌ ಸಿಂದೂರ ಮುಗಿದಿಲ್ಲ.. ರಕ್ಷಣಾ ಸಚಿವರು ಹೇಳಿದ್ದೇನು?

ಸದ್ಯ ನಿನ್ನೆ ನಡೆದ ಆಪರೇಷನ್‌ ಸಿಂದೂರ್‌ ನಲ್ಲಿ ಟೆರರ್‌ರಿಸ್ಟ್‌ ಅಬ್ದುಲ್ ರೌಫ್ ಅಜರ್ ಹತ್ಯೆಯಾಗಿದ್ದಾನೆ..ಈತನ ಹತ್ಯೆಯೂ ಭಯೋತ್ಪಾದಕತೆಯನ್ನ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿದೆ..

 

Exit mobile version