ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಮತ್ತೆ ಟೆನ್ಷನ್‌ ಶುರುವಾಗಿದೆ. ಪ್ರಕರಣ ಸಂಬಂಧ ಇಂದು 64ನೇ ಸೆಷನ್ಸ್ ಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ. ದರ್ಶನ್‌ ಹಾಗೂ ಅವರ ಗ್ಯಾಂಗ್ ವಿಚಾರಣೆಗೆ ಹಾಜರಾಗಿದ್ರು. ಎಲ್ಲಾ ಆರೋಪಿಗಳು ಹಾಜಾರಾದರೆ ಇಂದೇ ಚಾರ್ಜಸ್ ಫ್ರೇಮ್ ಮಾಡುವ ಸಾದ್ಯತೆ ಇತ್ತು.

ಆದರೆ, ಎ10 ವಿನಯ್ , ಎ15 ,ಕಾರ್ತಿಕ್ ಹಾಗೂ ಎ 16 ಕೇಶವಮೂರ್ತಿ ಮತ್ತು ಎ17 ನಿಖಿಲ್ ಕೋರ್ಟ್‌ಗೆ ಹಾಜಾರಾಗಿಲ್ಲ ಹೀಗಾಗಿ, ಸೆಪ್ಟೆಂಬರ್9ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಆ ದಿನ ಪ್ರಕರಣದ ಎಲ್ಲಾ ಆರೋಪಿಗಳು ಹಾಜರು ಇರಬೇಕು ಎಂದು ನಿರ್ದೇಶಿಸಿದೆ. ಚಾರ್ಜ್ ಪ್ರೇಮ್ ಅಂದ್ರೆ ದೋಷಾರೋಪ ಹೊರಿಸುವುದು‌. ಯಾವ ಯಾವ ಸೆಕ್ಷನ್‌ಗಳಡಿ ಆರೋಪ ಇದೆ ಎಂದು ಕೋರ್ಟ್‌ನಲ್ಲಿ ಜಡ್ಜ್ ಆರೋಪ ಹೊರಿಸುತ್ತಾರೆ. ಆ ಸೆಕ್ಷನ್‌​​ಗಳ ಬಗ್ಗೆ ಕೋರ್ಟ್​ನಲ್ಲಿ ಇನ್ನು ಮುಂದೆ ವಾದ ನಡೆಯುತ್ತೆ. ಹೀಗಾಗಿ ಆರೋಪಿಗಳಿಗೆ ಟೆನ್ಷನ್ ಶುರುವಾಗಿದೆ.

ಈಗಾಗಲೇ ಸುಪ್ರೀಂ ಕೋರ್ಟ್ ಜಾಮೀನು ಮೇಲ್ಮನವಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಟ್ರಯಲ್ ಬಗ್ಗೆ ಪ್ರಶ್ನಿಸಿತ್ತು. ಸರ್ಕಾರದ ಪರ ವಕೀಲರು ಆರು ತಿಂಗಳುಗಳಲ್ಲಿ ವಿಚಾರಣೆ ಮುಗಿಸುತ್ತೇವೆ ಅಂತಾ ಹೇಳಿದ್ದರು. ಈಗ ಡಿ ಗ್ಯಾಂಗ್‌ಗೆ ಒಂದ್ಕಡೆ ಟ್ರಯಲ್‌ ಆರಂಭದ ಚಿಂತೆಯಾದ್ರೆ ಇನ್ನೊಂದ್ಕಡೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಮೇಲ್ಮನವಿ ವಿಚಾರಣೆಯ ಆದೇಶ ಕೂಡ ಬಾಕಿ ಇದೆ.

Share.
Leave A Reply