ನಾಳೆ ರಾಹುಗ್ರಸ್ಥ ರಕ್ತ ಚಂದ್ರಗ್ರಹಣ ಸಂಭವಿಸಲಿದ್ದು, ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ನಾಳೆ ರಾತ್ರಿ 9:57 ರಿಂದ 1: 26ರವರೆಗೆ ಸುಮಾರು 3 ಗಂಟೆ 29 ನಿಮಿಷದವರೆಗೂ ಚಂದ್ರ ಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆಯಿಂದ ಗವಿ ಗಂಗಾಧರೇಶ್ವರ ದೇವಸ್ಥಾನ ಕ್ಲೋಸ್ ಆಗಿರಲಿದೆ. ಶಿವನಿಗೆ ಅಭಿಷೇಕ ಮಾಡಿ ಬೆಳಗ್ಗೆ 11 ಗಂಟೆಗೆ ದೇವಸ್ಥಾನ ಬಂದ್ ಮಾಡಲಾಗುತ್ತದೆ. ಸೋಮವಾರ ಮುಂಜಾನೆ ಶುದ್ದಿಕಾರ್ಯ ನಡೆಸಿ ಬಳಿಕ ದೇವಸ್ಥಾನ ಬಾಗಿಲು ತೆರೆಯಲಿದೆ.
ಬೆಂಗಳೂರಿನ ಮತ್ತೊಂದು ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನ ಸಹ ಗ್ರಹಣದ ದಿನ ಬಂದ್ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ದೇವಸ್ಥಾನ ಕ್ಲೋಸ್ ಮಾಡಲಾಗಿದ್ದು, ಮಧ್ಯಾಹ್ನ 2:30ರ ನಂತರ ಭಕ್ತರಿಗೆ ದರ್ಶನ ಮಾಡಲು ಅವಕಾಶ ಕೊಡಲಾಗುವುದಿಲ್ಲ. ಬನಶಂಕರಿ ದೇವಿ ದೇವಸ್ಥಾನವನ್ನ ಸಹ ಗ್ರಹಣದ ದಿನ ಕ್ಲೋಸ್ ಮಾಡಲಾಗುತ್ತದೆ. ಅಲ್ಲದೇ ಇಸ್ಕಾನ್, ಅಣ್ಣಮ್ಮ ದೇವಿ ದೇವಸ್ಥಾನ, ಬುಲ್ ಟೆಂಪಲ್ ಹಾಗೂ ನಗರದ ಪ್ರಮುಖ ದೇವಸ್ಥಾನಗಳು ಗ್ರಹಣ ಆರಂಭವಾಗುವ ಮುನ್ನವೇ ಬಂದ್ ಮಾಡಲಾಗುತ್ತದೆ.
Read Also : ಭಾದ್ರಪದ ಪೂರ್ಣಿಮಾ ಚಂದ್ರಗ್ರಹಣ.. ಈ ರಾಶಿಯವರಿಗೆ ಕಾದಿದೆ ಗಂಡಾಂತರ!

