Site icon BosstvKannada

ರೋಚಕ ಟೆಸ್ಟ್‌ನಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ, ಸರಣಿ ಸಮ ಬಲ ಸಾಧಿಸಿದ ಭಾರತ

ಭಾರತ ಹಾಗೂ ಇಂಗ್ಲೆಂಡ್‌ ನಡುವೆ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿ ಡ್ರಾದಲ್ಲಿ ಕೊನೆಗೊಂಡಿದೆ. ಓವಲ್​ನಲ್ಲಿ ನಡೆದ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲ್ಲಲು ಕೊನೆಯ ದಿನದಲ್ಲಿ 35 ರನ್ ಬೇಕಿದ್ದರೆ, ಇತ್ತ ಟೀಂ ಇಂಡಿಯಾ ಗೆಲ್ಲಲು 4 ವಿಕೆಟ್​ಗಳ ಅವಶ್ಯಕತೆ ಇತ್ತು. ಅದರಂತೆ ಐದನೇ ದಿನದಾಟ ಆರಂಭವಾದ ಕೆಲವೇ ಕೆಲವು ಓವರ್​ಗಳಲ್ಲಿ ಇಂಗ್ಲೆಂಡ್‌ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ ವೀರೋಚಿತ ಗೆಲುವು ಸಾಧಿಸಿತು.

ಓವಲ್ ಟೆಸ್ಟ್ ಮಾತ್ರವಲ್ಲ, ಆ್ಯಂಡರ್ಸನ್- ತೆಂಡೂಲ್ಕರ್ ಟೆಸ್ಟ್ ಸರಣಿಯೇ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿತ್ತು. ಈ ಹಂತದಲ್ಲಿ ವಿಜಯ ಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬ ಬಗ್ಗೆಯೂ ಕುತೂಹಲ ಗರಿಗೆದರಿತ್ತು. ಕೊನೆಯ ಟೆಸ್ಟ್‌ ಗೆಲ್ಲುವ ಮೂಲಕ ಇಂಗ್ಲೆಂಡ್ ನಲ್ಲಿ ನಡೆದ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿಯಲ್ಲಿ 2-2 ರಮೂಲಕ ಭಾರತ ಸಮಬಲ ಸಾಧಿಸಿದೆ.

ಕೊನೆಯ ಟೆಸ್ಟ್‌ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ತಂಡ ಪ್ರಥಮ ಇನ್ನಿಂಗ್ಸ್ ನಲ್ಲಿ 224 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ ನಲ್ಲಿ 247 ರನ್ ಗಳಿಸಿ 23 ರನ್ ಗಳ ಅಲ್ಪ ಮುನ್ನಡೆ ಸಾಧಿಸಿತು. ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಭಾರೀ ಹೋರಾಟ ನೀಡಿ 396 ರನ್ ಕಲೆ ಹಾಕಿತು. ಗೆಲ್ಲಲು 374 ರನ್ ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡ ಕೊನೆಯವರೆಗೂ ಹೋರಾಡಿ ವಿರೋಚಿತ ಸೋಲು ಕಂಡಿತ್ತು

Exit mobile version