Site icon BosstvKannada

ಏಷ್ಯಾ ಕಪ್‌ಗೆ ಟೀಂ ಇಂಡಿಯಾ ರೆಡಿ.. ರಾಹುಲ್‌, ಶ್ರೇಯಸ್‌ಗೆ ಶಾಕ್‌!

ಸೆಪ್ಟೆಂಬರ್‌ 9ರಿಂದ ನಡೆಯಲಿರುವ ಏಷ್ಯಾ ಕಪ್‌ಗೆ ಭಾರತ ತಂಡವನ್ನು ಪ್ರಕಟಿಸುವ ಬಗ್ಗೆ ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.. ಐಪಿಎಲ್‌, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿನ ಪ್ರದರ್ಶನ ಎಲ್ಲವನ್ನೂ ಗಮನಿಸಿ ಅಳೆದು ತೂಗಿ ಬಲಿಷ್ಠ ತಂಡವನ್ನು ಕಟ್ಟಲಾಗಿದೆ.. ಈಗಾಗಲೇ ಉತ್ತಮ ಟೀಂ ಇದ್ರೂ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ಬಗ್ಗೆಯೂ ಯೋಚಿಸಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆದ್ರೆ ಅಚ್ಚರಿ ಎಂಬಂತೆ ತಂಡದಲ್ಲಿ ಭಾರೀ ಬದಲಾವಣೆ ಮಾಡಿಲ್ಲ. ಟೆಸ್ಟ್‌ ತಂಡದ ನಾಯಕ ಶುಭ್‌ಮನ್‌ ಗಿಲ್‌ ಟಿ20ಗೆ ಕಮ್‌ಬ್ಯಾಕ್‌ ಮಾಡಿರೋದು ಎಲ್ಲರ ಗಮನ ಸೆಳೆದಿದೆ..

ಭಾರತ ತಂಡದ 15 ಆಟಗಾರರ ಪಟ್ಟಿ ಇಲ್ಲಿದೆ

ಇನ್ನೂ ಏಷ್ಯಾ ಕಪ್‌ಗೆ ಪ್ರಕಟಗೊಂಡಿರೋ ತಂಡವನ್ನು ಗಮನಿಸೋದಾದ್ರೆ ಗಾಯಗೊಂಡಿದ್ದ ಸೂರ್ಯ ಕುಮಾರ್‌ ಯಾದವ್‌ ಚೇತರಿಸಿಕೊಂಡಿದ್ದು ಮತ್ತೆ ನಾಯಕ ಸ್ಥಾನಕ್ಕೆ ಮರಳಿದ್ದಾರೆ.. ಶುಭ್‌ಮನ್‌ ಗಿಲ್‌ಗೆ ಉಪನಾಯಕನ ಪಟ್ಟ ನೀಡಲಾಗಿದೆ.. ಇನ್ನೂ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ತಮ್ಮ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದ್ದಾರೆ.. ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್‌, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ಹಾಗೂ ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ.

ಇನ್ನೂ ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಯಶಸ್ವಿ ಜೈಸ್ವಾಲ್‌, ಮೊಹಮ್ಮದ್‌ ಸಿರಾಜ್‌ ಹಾಗೂ ವಾಷಿಂಗ್‌ಟನ್‌ ಸುಂದರ್‌ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿತ್ತು.. ಆದ್ರೆ ಈಗಾಗಲೇ ಪ್ರತಿಯೊಂದು ಸ್ಥಾನಕ್ಕೆ ಭಾರೀ ಪೈಪೋಟಿ ಇರುವ ಕಾರಣ ಈ ಆಟಗಾರರು ತಂಡದಿಂದ ದೂರ ಉಳಿದಿದ್ದಾರೆ.. ಸದ್ಯ ಟಿ20 ಮಾದರಿಯಲ್ಲಿ ನಡೆಯಲಿರುವ ಏಷ್ಯಾ ಕಪ್‌ ಸೆಪ್ಟೆಂಬರ್‌ 9ರಿಂದ ಸೆಪ್ಟೆಂಬರ್‌ 28ರವರೆಗೆ ನಡೆಯಲಿದೆ.. ಸೆಪ್ಟೆಂಬರ್‌ 14ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಭಾರೀ ನಿರೀಕ್ಷೆ ಮೂಡಿಸಿದೆ..

Real Also : ಕೊಹ್ಲಿ ಫ್ಯಾನ್ಸ್​ಗೆ ಗುಡ್ ನ್ಯೂಸ್.. ಆಸ್ಟ್ರೇಲಿಯಾ ತಂಡಕ್ಕೆ ನಡುಕ!

Exit mobile version