Site icon BosstvKannada

ಸುಷ್ಮಾ ಸ್ವರಾಜ್ ಪತಿ ಇನ್ನಿಲ್ಲ

ನವದೆಹಲಿ: ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ದಿ. ಸುಷ್ಮಾ ಸ್ವರಾಜ್(Sushma Swaraj) ಅವರ ಪತಿ ಇಹಲೋಕ ತ್ಯಜಿಸಿದ್ದಾರೆ.

ಈ ಕುರಿತು ದೆಹಲಿ ಬಿಜೆಪಿಯು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಮಿಜೋರಾಂನ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ (73) (Swaraj Kaushal) ಇಂದು ನಿಧನರಾಗಿದ್ದಾರೆ. ಕೌಶಲ್ ವಕೀಲ ವೃತ್ತಿಯಿಂದ ಹೆಸರು ಕೂಡ ಮಾಡಿದ್ದರು. ಅವರ ಪುತ್ರಿ ಬಾನ್ಸೂರಿ ಸ್ವರಾಜ್ ಸಂಸದೆಯಾಗಿದ್ದಾರೆ.

ಎಕ್ಸ್ ನಲ್ಲಿ ಬಿಜೆಪಿಯು, ಮಿಜೋರಾಂನ ಮಾಜಿ ರಾಜ್ಯಪಾಲರು ಹಾಗೂ ಹಿರಿಯ ವಕೀಲರಾಗಿದ್ದ ಸ್ವರಾಜ್ ಕೌಶಲ್ ಅವರ ಹಠಾತ್ ನಿಧನದ ಸುದ್ದಿ ತಿಳಿಸಲು ವಿಷಾದಿಸುತ್ತೇವೆ. ಮಧ್ಯಾಹ್ನ ಎದೆನೋವು ಕಾಣಿಸಿಕೊಂಡ ನಂತರ ಅವರನ್ನು AIIMSಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ ಎಂದು ಹೇಳಿದೆ. ಬಿಜೆಪಿ ನಾಯಕರು, ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.

Exit mobile version