Site icon BosstvKannada

ಪ್ರಧಾನಿ Narendra Modi ಭೇಟಿಯಾದ ಸೂರ್ಯವಂಶಿ!

Narendra Modi

Narendra Modi: ಐಪಿಎಲ್‌ನ ಯಂಗೆಸ್ಟ್‌ ಪ್ಲೇಯರ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡದ ಕ್ರಿಕೆಟಿಗ ವೈಭವ್‌ ಸೂರ್ಯವಂಶಿ ಸದ್ಯ ಕ್ರಿಕೆಟ್‌ ಲೋಕದಲ್ಲಿ ರಾರಾಜಿಸ್ತಾ ಇದ್ದಾರೆ. ಇತ್ತೀಚೆಗಷ್ಟೇ ಧೋನಿ ಕಾಲಿಗೆರಗಿ ವೈಭವ್‌ ಆಶೀರ್ವಾದ ಪಡೆದಿದ್ರು. ಈ ವಿಡಿಯೋ ವೈರಲ್‌ ಆಗ್ದತಿದ್ದಂತೆ, ನೆಟ್ಟಿಗರು ವೈಭವ್‌ ನಡವಳಿಕೆ ನೋಡಿ ಫಿದಾ ಆಗಿದ್ರು.

ಇದೀಗ ಮತ್ತೊಂದು ವಿಡಿಯೋ ಮೂಲಕ ವೈಭವ್‌ ಅವರು ಸೋಷಿಯಲ್‌ ಮೀಡಿಯಾ ಸೆನ್ಸೇಷನ್‌ ಅಗಿದ್ದಾರೆ. ಪ್ರಧಾನಿ ಮೋದಿ ಬಿಹಾರ ಪ್ರವಾಸದ ಸಂದರ್ಭದಲ್ಲಿ ಪಾಟ್ನಾದ ವಿಮಾನ ನಿಲ್ದಾಣದಲ್ಲಿ ಅಚಾನಕ್‌ ಆಗಿ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಭೇಟಿ ಮಾಡಿದರು.

ಈ ವೇಳೆ ವೈಭವ್ ಅವರು ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿದರು. ವೈಭವ್ ಅವರ ಕ್ರಿಕೆಟ್ ಕೌಶಲ್ಯವನ್ನು ಹೊಗಳಿರುವ ಮೋದಿ ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. 2025ರ ಐಪಿಎಲ್ ಸೀಸನ್‌ನಲ್ಲಿ ವೈಭವ್ ಅವರ ಅದ್ಭುತ ಪ್ರದರ್ಶನಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ.

ಪಾಟ್ನಾ ವಿಮಾನ ನಿಲ್ದಾಣದಲ್ಲಿ, ಯಂಗ್‌ ಕ್ರಿಕೆಟಿಂಗ್‌ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬವನ್ನು ಭೇಟಿಯಾದೆ. ಅವರ ಕ್ರಿಕೆಟ್ ಕೌಶಲ್ಯವನ್ನು ಇಂದು ಇಡೀ ದೇಶವೇ ಕೊಂಡಾಡ್ತಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

Also Read: Kamal Hassan :ಕಮಲ್‌ರನ್ನ ಶಿವಣ್ಣ ರಕ್ಷಣೆ ಮಾಡ್ತಿರೋದು ಸರಿಯಲ್ಲ: ಶಿವಣ್ಣನ ವಿರುದ್ಧ ಗಣಿಗ ರವಿ ಗರಂ

ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ, ಗುಜರಾತ್ ಟೈಟನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತಿ ವೇಗದ ಶತಕ ಇದಾಗಿದೆ

Exit mobile version