Site icon BosstvKannada

ವಿಧಾನಸಭೆಯಲ್ಲಿ ಮಂಡಿಸಿದ 3 ವಿಧೇಯಕಗಳನ್ನ ವಾಪಸ್ ಪಡೆದ ರಾಜ್ಯ ಸರ್ಕಾರ

ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯಲ್ಲಿ ಮಂಡಿಸಿದ್ದ ಮೂರು ವಿಧೇಯಕಗಳನ್ನ ಇಂದು ವಾಪಸ್ ಪಡೆಯಲಾಗಿದೆ.

ನೋಂದಣಿ ತಿದ್ದುಪಡಿ ವಿಧೇಯಕ, ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ, ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳನ್ನ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಶಾಸನ ರಚನಾ ಕಲಾಪದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಈ ಮೂರೂ ವಿಧೇಯಕಗಳನ್ನು ಮಂಡಿಸಿ ಹಿಂದಕ್ಕೆ ಪಡೆಯಲು ಮನವಿ ಮಾಡಿದರು.

ಈ ಮೂರೂ ವಿಧೇಯಕಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹೊಸದಾಗಿ ಹಲವಾರು ಸುಧಾರಣೆ ಕ್ರಮಗಳು, ಅನೇಕ ವಿಚಾರಗಳನ್ನೊಳಗೊಂಡ ವಿಧೇಯಕಗಳನ್ನು ತರಲಾಗಿದ್ದು, ಈ ವಿಧೇಯಕಗಳು ಅಗತ್ಯವಿರಲಿಲ್ಲ. ಹೀಗಾಗಿ ಇವುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಕೋರಿದರು. ಬಳಿಕ ಸಭಾಧ್ಯಕ್ಷರು ಈ ವಿಧೇಯಕಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪ್ರಕಟಿಸಿದರು.

Read Also : ಅಮಿತ್‌ ಶಾ ಮಂಡಿಸಿದ ಮಸೂದೆಗೆ ತೀವ್ರ ವಿರೋಧ, ಮಸೂದೆ ಹರಿದು.. ಶಾ ಕಡೆಗೆ ಎಸೆದು.. ಪ್ರತಿಪಕ್ಷಗಳ ಆಕ್ರೋಶ

Exit mobile version