BosstvKannada

Sri Sri Ravi Shankar : ಜೂನ್ 16 ಇನ್ಮುಂದೆ ಶ್ರೀ ಶ್ರೀ ರವಿಶಂಕರ್ ದಿನ… ಫ್ಲೋರಿಡಾದ ಜಾಕ್ಸನ್​​ವಿಲ್ಲೆಯಿಂದ ಮಹತ್ವದ ಘೋಷಣೆ

ಆರ್ಟ್​ ಆಫ್​ ಲಿವಿಂಗ್​​ನ ಶ್ರೀ ಶ್ರೀ ರವಿಶಂಕರ್ ಗುರೂಜಿಯ(Sri Sri Ravi Shankar) ಸೇವೆ, ಜ್ಞಾನ, ಕೊಡುಗೆಗಳನ್ನು ಗಮನಿಸಿ ಫ್ಲೋರಿಡಾದ (Florida) ಜಾಕ್ಸನ್​​ವಿಲ್ಲೆ ನಗರ ಅಪೂರ್ವ ಗೌರವ ಸಲ್ಲಿಸಿದೆ.. ಸಮಾಜಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಪ್ರತಿಮ ಕೊಡುಗೆ ನೀಡಿರುವ ಕಾರಣ ಜೂನ್ 16ನ್ನು ʻಶ್ರೀ ಶ್ರೀ ರವಿ ಶಂಕರ್ ಶಾಂತಿ ಮತ್ತು ಸ್ವಾಸ್ಥ್ಯ ದಿನʼ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ನಾರ್ತ್ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ (University of North Florida) ನಡೆದ ಸಮಾರಂಭದಲ್ಲಿ ಅಲ್ಲಿನ ಮೇಯರ್ ಔಪಚಾರಿಕವಾಗಿ ಘೋಷಿಸಿದರು. ಈ ಮೂಲಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಜೀವಮಾನದ ಸೇವೆ, ತಿಳಿವಳಿಕೆ, ಏಕತೆ ಹಾಗೂ ಆರೋಗ್ಯವನ್ನು ಪೋಷಿಸುವಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ (The Art of Living Foundation ) ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಗುರುತಿಸಲಾಗಿದೆ. ಜೊತೆಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರಖ್ಯಾತಿ ಎಷ್ಟಿದೆ ಅನ್ನೋದು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಬಹಿರಂಗವಾಯಿತು. ಅಂದಹಾಗೆ ಜ್ಯಾಕ್ಸನ್ವಿಲ್ ನಗರವು(Jacksonville) , ಜಾಗತಿಕವಾಗಿ ಶ್ರೀ ಶ್ರೀ ರವಿ ಶಂಕರ್ ದಿನವನ್ನು ಘೋಷಿಸಿದ 32ನೇ ನಗರವಾಗಿದೆ.

Exit mobile version