
ದೀಪಾವಳಿ ಹಬ್ಬದ ಸಲುವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಕ್ಕೆ 2500 ವಿಶೇಷ ಬಸ್‌ಗಳು ಅಕ್ಟೋಬರ್ 17ರಿಂದ 26ರವರೆಗೆ ಕಾರ್ಯನಿರ್ವಹಿಸಲಿವೆ. ಮೆಜೆಸ್ಟಿಕ್, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿ ನಗರ ನಿಲ್ದಾಣದಿಂದ ಅ.17 ರಿಂದ 20ರ ವರೆಗೆ ಬಸ್‌ಗಳು ಹೊರಡಲಿವೆ. ಇನ್ನು, ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಅ.22 ರಿಂದ 26 ರ ವರೆಗೆ ಬೆಂಗಳೂರಿಗೆ ವಿಶೇಷ ಬಸ್‌ಗಳು ಬರಲಿವೆ. ಜೊತೆಗೆ ರಿಸರ್ವೇಷನ್ ಸೌಲಭ್ಯ ಕೂಡ ಇರಲಿದೆ. www.ksrtc karnataka.gov.in ವೆಬ್‌ಸೈಟ್ ಮುಖಾಂತರ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದಲ್ಲಿ ಶೇ. 5 ರಷ್ಟು ರಿಯಾಯಿತಿ ಕೂಡ ನೀಡಲಾಗುತ್ತೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ KSRTC ವೆಬ್‌ಸೈಟ್‌ಗೆ ಭೇಟಿ ನೀಡಿ.
Read Also : ಟೆಲಿಸ್ಕೋಪ್ ತಯಾರಿಸಿ ವಿಶ್ವದಾಖಲೆ ಬರೆದ ವಿದ್ಯಾರ್ಥಿಗಳು : ನಾನು ವಿಜ್ಞಾನಿಯಾಗಬೇಕು ಎಂಬ ಮಕ್ಕಳಿಗೆ ಹುಲಿಕಲ್ ಮಾರ್ಗದರ್ಶನ