ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ಕೆಟ್ಟ ಕಾಮೆಂಟ್ ಮಾಡಿದ್ದವರಿಗೆ ಈಗ ನಡುಕ ಶುರುವಾಗಿದೆ. ತುಂಬಾ ಅವಹೇಳನಕಾರಿಯಾಗಿ ಮೆಸೇಜ್ ಮಾಡಿ ಪುಂಡಾಟ ಮೆರೆದಿದ್ದ ಪುಂಡರು ಈಗ ಕ್ಷಮಿಸಿ ಬಿಡಿ ಮೇಡಂ ಅಂತಾ ಗೋಗರೆಯುತ್ತಿದ್ದಾರೆ.. ಪ್ಲೀಸ್ ನಮ್ಮನ್ನ ಬಿಟ್ ಬಿಡಿ ಮೇಡಂ ತಪ್ಪಾಗಿದೆ ಅಂತೆಲ್ಲಾ ಅಂಗಲಾಚುತ್ತಿದ್ದಾರೆ..
ನಟಿ ರಮ್ಯಾಗೆ ಬೈದಿದ್ದ ಡಿ ಫ್ಯಾನ್ಸ್ ಈಗ ಉಲ್ಟಾ!
ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದ ನಟಿ ರಮ್ಯಾ ಅವರನ್ನು ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಕೆಟ್ಟದಾಗಿ ಕಮೆಂಟ್ ಮಾಡಿ ಟ್ರೋಲ್ ಮಾಡಿದ್ದರು.. ಇದ್ರಿಂದ ಸಿಟ್ಟಾಗಿದ್ದ ರಮ್ಯಾ, ದರ್ಶನ್ ಅಭಿಮಾನಿಗಳು ಕಳಿಸಿದ ಮೆಸೇಜ್‌ಗಳನ್ನು ಎಕ್ಸ್ಪೋಸ್ ಮಾಡಿದ್ದರು. ಆ ನಂತರದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಕೆಟ್ಟ ಮೇಲೆ ಬುದ್ಧಿ ಕಲಿತಿರುವ ಡಿ ಫ್ಯಾನ್ಸ್ ಈಗ ಉಲ್ಟಾ ಹೊಡೆದಿದ್ದಾರೆ. ರಮ್ಯಾ ಅವರ ದಿಟ್ಟ ನಡೆಗೆ ಹೆದರಿದ ದರ್ಶನ್ ಫ್ಯಾನ್ಸ್ ತಾವು ಕಮೆಂಟ್ ಮಾಡಿದ ಅಕೌಂಟ್ಗಳನ್ನು ಡಿಲೀಟ್ ಮಾಡಿದ್ದರು. ಆದರೆ ಅಕೌಂಟ್ ಡಿಲೀಟ್ ಮಾಡೋ ಮುನ್ನವೇ URL ID ಸಿಕ್ಕಿದೆ.. ಇದ್ರಿಂದ ಕೆಟ್ಟ ಕಮೆಂಟ್ ಮಾಡೋರಿಗೆ ಕಂಟಕ ಎದುರಾಗೋದು ಫಿಕ್ಸ್ ಆಗಿದೆ.
ರಮ್ಯಾ ಕಂಪ್ಲೇಂಟ್‌ಗೆ ಡಿ ಅಭಿಮಾನಿಗಳು ಥಂಡಾ!
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಕೋರಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆದಿತ್ತು.. ಈಗ ದರ್ಶನ್ ಬೇಲ್ ರದ್ದಾಗಬಹುದು ಅಂತಲೂ ಚರ್ಚೆಯಾಗುತ್ತಿದೆ. ಇದೇ ವಿಚಾರವಾಗಿ ಸುಪ್ರೀಂಕೋರ್ಟ್ ಅಭಿಪ್ರಾಯ ಕುರಿತು ರಮ್ಯಾ ಸ್ಟೋರಿ ಹಾಕಿದ್ದರು.. ಅದೇ ಕಾರಣಕ್ಕೆ ವಿವಿಧ ಇನ್‌ಸ್ಟಾಗ್ರಾಮ್ ಖಾತೆಗಳಿಂದ ಬಹಳ ಅಹಸ್ಯಕರ, ಅವಹೇಳಕಾರಿ ಮೆಸೇಜ್‌ಗಳನ್ನು ಕಳುಹಿಸಿದ್ದರು. ಆ ಮೆಸೇಜ್‌ಗಳು ಸ್ತ್ರೀದ್ವೇಷದಿಂದ ಕೂಡಿದ್ದು, ದೂರಿನಲ್ಲಿ ಉಲ್ಲೇಖಿಸಲು ಸಾಧ್ಯವಾಗ್ತಿಲ್ಲ. ಆ ಮೆಸೇಜ್ ಲಿಂಕ್‌ಗಳನ್ನು ದೂರಿನಲ್ಲಿ ಲಗತ್ತಿಸಿದ್ದೀನಿ. ದರ್ಶನ್ ಅಭಿಮಾನಿಗಳ ಪೋಸ್ಟ್ ಅತಿರೇಕ, ಕೊಳಕು ಹಾಗೂ ಬೆದರಿಕೆ ಒಡ್ಡುವಂತಿದೆ. ಹಾಗಾಗಿ ಕ್ರಮ ಕೈಗೊಳ್ಳಬೇಕು ಎಂದು ರಮ್ಯಾ ದೂರಿನಲ್ಲಿ ಆಗ್ರಹಿಸಿದ್ದಾರೆ.
ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಮೋದ್ ಗೌಡ ಎಂಬ ವ್ಯಕ್ತಿ ಸೇರಿ 43 ಜನರ ವಿರುದ್ಧ ಐಟಿ ಆಕ್ಟ್ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು ಹೀಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಿಡಿಗೇಡಿಗಳ ಎದೆಯಲ್ಲಿ ನಡುಕ ಶುರುವಾದಂತಿದೆ. ಕೆಲವರು ರಮ್ಯಾ ಅವರಿಗೆ ಮೆಸೇಜ್ ಮಾಡಿ ಕ್ಷಮೆ ಕೇಳಿ ದೂರು ವಾಪಸ್ ಪಡೆಯುವಂತೆ ಮನವಿ ಮಾಡುತ್ತಿದ್ದಾರೆ ಅಂತಾ ಕೆಲ ವಾಹಿನಿಗಳು ವರದಿ ಮಾಡಿದೆ. ಅಲ್ಲದೇ, ಇನ್ನೂ ಕೆಲವರು ನಮ್ಮ ಮನೆಯಲ್ಲಿ ಯಾರೂ ಇಲ್ಲ.. ನಾನೇ ಎಲ್ಲಾ ನೋಡಿಕೊಳ್ಬೇಕು.. ಪ್ಲೀಸ್ ನನ್ನ ಬಿಟ್ ಬಿಡಿ ಮೇಡಂ ಅಂತೆಲ್ಲಾ ಮೆಸೇಜ್ ಮಾಡಿ ಬೇಡಿಕೊಳ್ಳುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ..
ಸದ್ಯ ಇದನ್ನೆಲ್ಲ ನೋಡಿದ್ರೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ನಾಯಕ ನಟನ ಮೇಲಿನ ಹುಚ್ಚು ಪ್ರೀತಿಗೆ, ಇವರ ಜೀವನ ಹಾಳು ಮಾಡಿಕೊಳ್ಳೊದು ಇವರಿಗೆಲ್ಲ ಬೇಕಾ? ಅಂತಾ ಚರ್ಚೆ ಆಗ್ತಿದೆ.. ಇದಕ್ಕೆ ನೀವೇನ್ ಹೇಳ್ತೀರಾ… ಕಮೆಂಟ್ ಮಾಡಿ ಹೇಳಿ.

