Site icon BosstvKannada

ಮರಭೂಮಿ ದೇಶ ಸೌದಿ ರೇಬಿಯಾದಲ್ಲಿ ಹಿಮಪಾತ, ಗುಡುಗು ಸಹಿತ ಮಳೆ

ರಿಯಾದ್: ಮರುಭೂಮಿಯಾಗಿರುವ ಸೌದಿ ಅರೇಬಿಯಾದಲ್ಲಿ ಹಿಮಪಾತ ಬಿದ್ದಿದೆ. ಅಲ್ಲದೇ, ಗುಡುಗು ಸಹಿತ ಭಾರೀ ಮಳೆಯಾಗಿದೆ.

ಸೌದಿ ಅರೇಬಿಯಾದ ಉತ್ತರದ ತಬೂಕ್ ಪ್ರದೇಶದ ಜಬಲ್ ಅಲ್ ಲಾವ್ಜ್ ಬೆಟ್ಟ ಮತ್ತು ಇತರ ಬೆಟ್ಟಗಳು ಹಿಮದಿಂದ ಆವೃತವಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಅಲ್ಲದೇ, ತಬೂಕ್, ಹೈಲ್, ಅಲ್ ಖಾಸಿಂ, ರಿಯಾದ್‌ನ ಉತ್ತರ ಭಾಗ ಮತ್ತು ಮದೀನಾ ಪ್ರದೇಶಗಳಲ್ಲಿ ಹಿಮಪಾತ ಹಾಗೂ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಕೂಡ ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದರಿಂದಾಗಿ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಕೆಲವೆಡೆ ತಾಪಮಾನ ಮೈನಸ್ 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬಿರುಗಾಳಿ, ಆಲಿಕಲ್ಲು, ಹಠಾತ್ ಪ್ರವಾಹ ಮತ್ತು ಸಮುದ್ರದಲ್ಲಿ ಎತ್ತರದ ಅಲೆಗಳು ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಜನರು ಸುರಕ್ಷಿತವಾಗಿರುವಂತೆ ತಿಳಿಸಲಾಗಿದೆ.

Exit mobile version