Site icon BosstvKannada

ದಾಖಲೆಯ ರನ್ ಗಳಿಸಿದ ಸ್ಮೃತಿ, ಶಫಾಲಿ

ಶ್ರೀಲಂಕಾ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಭರ್ಜರಿ ಆರಂಭ ಸಿಕ್ಕಿತು. ಪರಿಣಾಮ ಭಾರತ ತಂಡವು ನಿಗದಿತ ಓವರ್ ಗಳಲ್ಲಿ 221 ರನ್ ಗಳಿಸಿತು. ಈ ರನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡ ಕಲೆ ಹಾಕಿದ ಅತ್ಯಧಿಕ ರನ್ ಆಗಿದೆ.

ಆರಂಭದಿಂದಲೂ ಅಬ್ಬರಿಸಿದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್ಗೆ ದಾಖಲೆಯ 162 ರನ್ಗಳ ಜೊತೆಯಾಟ ನೀಡಿದ್ದಾರೆ. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತದ ಆರಂಭಿಕ ಜೋಡಿ ಮೊದಲ ವಿಕೆಟ್ಗೆ ಕಲೆಹಾಕಿದ ಅತ್ಯಧಿಕ ರನ್ಗಳ ಜೊತೆಯಾಟ ಕೂಡ ಆಗಿದೆ. ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಶಫಾಲಿ 46 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 79 ರನ್ ಬಾರಿಸಿದರೆ, ಸ್ಮೃತಿ ಮಂಧಾನ 48 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 80 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಈ ಜೋಡಿ 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 142 ರನ್‌ಗಳ ಜೊತೆಯಾಟ ಕಟ್ಟಿದ್ದರು. ಅಲ್ಲದೇ, ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೋಡಿಗಳ ಪಟ್ಟಿಯಲ್ಲಿ ಮಂಧಾನ ಮತ್ತು ಶಫಾಲಿ ನಂ. 1 ಸ್ಥಾನ ಹೊಂದಿದ್ದಾರೆ. ಈ ಜೋಡಿ ಇನ್ನಿಂಗ್ಸ್ ಆರಂಭಿಸಿ 3,107 ರನ್ ಕಲೆಹಾಕಿದ್ದಾರೆ. ಆಸ್ಟ್ರೇಲಿಯಾದ ಅಲಿಸಾ ಹೀಲಿ ಮತ್ತು ಬೆತ್ ಮೂನಿ 2,720 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Exit mobile version