ಬೆಂಗಳೂರು: ರಾಜ್ಯದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷಣದ ಗುಣಮಟ್ಟದ ಆತಂಕ ಶುರುವಾಗಿದೆ.
ಶೈಕ್ಷಣಿಕ ವರ್ಷದಲ್ಲಿ 6,675ಕ್ಕೆ ಏರಿಕೆ ಕಂಡಿದೆ. ಇಷ್ಟೊಂದು ಶಾಲೆಗಳಲ್ಲಿ ಒಬ್ಬರೇ ಒಬ್ಬ ಶಿಕ್ಷಕರಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಇಂತಹ ಶಾಲೆಗಳ ಸಂಖ್ಯೆ ಸುಮಾರು 1,200ರಷ್ಟು ಹೆಚ್ಚಾಗಿವೆ. 2024–25ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 5,412 ಏಕ ಶಿಕ್ಷಕ ಶಾಲೆಗಳಿದ್ದರೆ, ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 1,263 ಹೆಚ್ಚಳವಾಗಿವೆ. ಹೀಗಾಗಿ ಬುದ್ಧಿವಂತರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 49 ಸಾವಿರ ಸರ್ಕಾರಿ ಶಾಲೆಗಳಿದ್ದು, ಹಾಸನದಲ್ಲಿಯೇ ಏಕೋಪಾಧ್ಯಾಯ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ತುಮಕೂರು ಎರಡನೇ ಸ್ಥಾನದಲ್ಲಿದೆ. ಶೈಕ್ಷಣಿಕ ವರ್ಷದಲ್ಲಿ ಸರ್ಕಾರವು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ.
ಏಕೋಪಾಧ್ಯಾಯ ಶಾಲೆಗಳ ಪೈಕಿ ಕೆಲವು ಶಾಲೆಗಳಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇಂತಹ ಶಾಲೆಗಳಲ್ಲಿ ಶಿಕ್ಷಕರು 1 ರಿಂದ 5ನೇ ತರಗತಿಯವರೆಗೆ ಪಾಠ ಮಾಡಬೇಕು. ಆದರೆ, ಒಬ್ಬರೇ ಶಿಕ್ಷಕರು ಒಂದೇ ತರಗತಿಯಲ್ಲಿ ಕೂಡಿಸಿಕೊಂಡು ಅದು ಹೇಗೆ ಪಾಠ ಮಾಡುತ್ತಾರೆ? ಮಕ್ಕಳ ಜ್ಞಾನ ಹೇಗೆ ಸುಧಾರಿಸುತ್ತೆ? ಮಕ್ಕಳ ಭವಿಷ್ಯ ಹೇಗೆ? ಎಂದು ಪಾಲಕರು ತಲೆ ಚಚ್ಚಿಕೊಳ್ಳುವಂತಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿಯಿಂದ ಗೊತ್ತಾಗಿದೆ.
ಏಕೋಪಾಧ್ಯಾಯ ಶಾಲೆಗಳಿರುವ ಜಿಲ್ಲೆಗಳು
ಹಾಸನ – 586
ತುಮಕೂರು – 426
ಕೋಲಾರ – 347
ಚಿಕ್ಕಬಳ್ಳಾಪುರ – 334
ಧಾರವಾಡ – 26
ಬೆಂಗಳೂರು ಉತ್ತರ – 39
ವಿಜಯನಗರ – 45
ಗದಗ – 46

