Site icon BosstvKannada

ನಿಜವಾಯ್ತ Singh ಭವಿಷ್ಯ.. ಕಪ್‌ ಗೆಲ್ಲೋದು ಇವ್ರೇನಾ?

Singh

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಆಟಗಾರನೋರ್ವ ನುಡಿದ ಭವಿಷ್ಯ ನಿಜವಾಗಿದೆ. ಈ ಬಾರಿಯ ಐಪಿಎಲ್​ನ ಲೀಗ್ ಹಂತದ ಪಂದ್ಯಗಳ ಬಳಿಕ ನಾವು ನಂಬರ್ ಒನ್ ಆಗ್ತೀವಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು(Singh). ಇದೀಗ 14 ಪಂದ್ಯಗಳ ಬಳಿಕ ಪಂಜಾಬ್ ಪಡೆ ಮೊದಲ ಸ್ಥಾನ ಅಲಂಕರಿಸಿದೆ. ಈ ಮೂಲಕ ಕಪ್‌ ಗೆಲ್ಲೋದು ನಾವೇ ಎಂಬ ಪಂಜಾಬ್‌ ಆಟಗಾರನ ಮೊದಲ ಭವಿಷ್ಯ ನಿಜವಾದಂತಿದೆ.

ಈ ಬಾರಿಯ ಐಪಿಎಲ್​ಗೂ ಮುನ್ನ ಪಂಜಾಬ್‌ ಕಿಂಗ್ಸ್‌ ಆಟಗಾರ ಶಶಾಂಕ್ ಸಿಂಗ್ ಪಾಡ್​ಕಾಸ್ಟ್​ವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಈ ಸೀಸನ್​ನಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳಾವುವು ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಶಶಾಂಕ್ ಸಿಂಗ್, ಟಾಪ್-1 ಪಂಜಾಬ್ ಕಿಂಗ್ಸ್ ಎಂದಾಗ. ಇದೇ ವೇಳೆ ಸಂದರ್ಶಕನು, ನೀವು ಅಗ್ರ ನಾಲ್ಕರಲ್ಲಿ ಕಾಣಿಸುತ್ತೀರಾ ಎಂದು ಮರು ಪ್ರಶ್ನಿಸಿದ್ದಾರೆ.

ಈ ವೇಳೆ ಪಂಜಾಬ್ ಕಿಂಗ್ಸ್ ತಂಡವು ಮೊದಲ ಸ್ಥಾನ ಅಲಂಕರಿಸಲಿದೆ. 14 ಪಂದ್ಯಗಳ ಬಳಿಕ ನಾನು ನಿಮಗೆ ಮೆಸೇಜ್ ಮಾಡ್ತೀನಿ. ಈ ಸಂದರ್ಶನವನ್ನು ನೀವು ಮತ್ತೆ ಹಾಕಬೇಕು ಎಂದು ಶಶಾಂಕ್ ಸಿಂಗ್ ಆತ್ಮ ವಿಶ್ವಾಸದಿಂದಲೇ ನುಡಿದಿದ್ದರು. ಅದರಂತೆ ಇದೀಗ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿ ಲೀಗ್ ಹಂತವನ್ನು ಮುಗಿಸಿದೆ. ಇತ್ತ ಪಂಜಾಬ್ ಪಡೆ ಟಾಪ್-1 ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಶಶಾಂಕ್ ಸಿಂಗ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜೈಪುರ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 69ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್​ ಕಲೆಹಾಕಿತು.

Also Read: ನನಗೆ ದುಡ್ಡುಬೇಡ ಸರ್‌.. ಮಗಳನ್ನ ಕೊಡಿ : ಸಚಿವ Chaluvarayaswamy ಮುಂದೆ ತಂದೆ ಆಕ್ರಂದನ

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 18.3 ಓವರ್​ಗಳಲ್ಲಿ 187 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಪಂಜಾಬ್ ಪಡೆ ಪ್ಲೇಆಫ್​ನಲ್ಲಿ ಮೊದಲ ಕ್ವಾಲಿಫೈಯರ್​ ಪಂದ್ಯವಾಡಲು ಅರ್ಹತೆ ಪಡೆದುಕೊಂಡಿದೆ. ಅದರಂತೆ ಮೇ 29 ರಂದು ಚಂಢೀಗಢ್​ನ ಮುಲ್ಲನ್​ಪುರ್​ನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಪಂಜಾಬ್ ಪಡೆ ಸೋತರೆ, ಜೂನ್ 1 ರಂದು ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲು ಮತ್ತೊಂದು ಅವಕಾಶ ದೊರೆಯಲಿದೆ.

Exit mobile version