BosstvKannada

Singer gets trolled for kissing female fan: ಮಹಿಳಾಭಿಮಾನಿಗೆ ಕಿಸ್‌ ಕೊಟ್ಟು ಟ್ರೋಲ್‌ ಆದ ಗಾಯಕ!

ಉದಿತ್ ನಾರಾಯಣ್ (Udit Narayan)ಭಾರತದ ಖ್ಯಾತ ಗಾಯಕ. ದಶಕಗಳಿಂದಲೂ ಭಾರತೀಯ ಚಿತ್ರರಂಗದ ಮೇರು ಗಾಯಕ ಎನಿಸಿಕೊಂಡಿದ್ದಾರೆ. ಎಸ್​ಪಿ ಬಾಲಸುಬ್ರಹ್ಮಣ್ಯಂ ಬಳಿಕ ಚಿತ್ರರಂಗದ ಹಿರಿಯ ಮತ್ತು ಗೌರವಾನ್ವಿತ ಗಾಯಕ ಎನಿಸಿಕೊಂಡಿರುವವರು, ಆದರೆ ಇತ್ತೀಚೆಗೆ ನಡೆದಿರುವ ಘಟನೆಯೊಂದು ಅವರ ಇಷ್ಟು ವರ್ಷದ ಗೌರವವನ್ನು ಮಣ್ಣುಪಾಲು ಮಾಡುತ್ತಿದೆ. ಇದೀಗ ಆ ಕೆಟ್ಟ ಘಟನೆ ಬಗ್ಗೆ ಸ್ವತಃ ಉದಿತ್ ನಾರಾಯಣ್ ಅವರೇ ಸ್ಪಷ್ಟನೆ ನೀಡಿದ್ದಾರೆ.

Udit Narayan

ಉದಿತ್ ನಾರಾಯಣ್ (Udit Narayan) ಅವರು ಇತ್ತೀಚೆಗಷ್ಟೆ ಲೈವ್ ಕಾನ್ಸರ್ಟ್ ಒಂದನ್ನು ನಡೆಸಿಕೊಟ್ಟರು. ಕಾನ್ಸರ್ಟ್​ ವೇಳೆ ವೇದಿಕೆ ಬಳಿ ಇದ್ದ ಯುವತಿಯೊಬ್ಬಾಕೆ ಹಿರಿಯ ಗಾಯಕನೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು ಉದಿತ್ ನಾರಾಯಣ್ ಸಹ ವೇದಿಕೆ ಮೇಲೆ ಕುಳಿತುಕೊಂಡೆ ಅಭಿಮಾನಿಗೆ ಸೆಲ್ಫಿ ನೀಡಿದರು. ಆದರೆ ಆ ವೇಳೆ ಮಹಿಳಾ ಅಭಿಮಾನಿ ಉದಿತ್ ನಾರಾಯಣ್ ಅವರ ಕೆನ್ನೆಗೆ ಮುತ್ತು ಕೊಟ್ಟಳು. ಕೂಡಲೇ ಉದಿತ್ ನಾರಾಯಣ್, ಆ ಮಹಿಳಾ ಅಭಿಮಾನಿಯನ್ನು ಹಿಡಿದು ಎಳೆದುಕೊಂಡು ತುಟಿಗೆ ತುಟಿ ಒತ್ತಿ ಮುತ್ತು ಕೊಟ್ಟೇ ಬಿಟ್ಟರು.

ಈ ಹಿಂದೆ ಇದೇ ರೀತಿ ಸ್ಟೇಜ್‌ ಮೇಲೆಯೇ ಖ್ಯಾತ ಗಾಯಕಿ ಶ್ರೇಯಾ ಘೋಷಲ್‌ಗೂ ಇದೇ ರೀತಿ ಕಿಸ್‌(Kiss) ಕೊಟ್ಟಿದ್ರೂ… ಅಲ್ಲದೇ ಸೆಲ್ಫಿ ತೆಗೆಸಿಕೊಳ್ಳಲು ಬಂದ ಮಹಿಳಾಭಿಮಾನಿಗೂ ಇದೇ ರೀತಿ ಕಿಸ್‌ ಕೊಟ್ಟು ಸುದ್ದಿಯಾಗಿದ್ರು…

ಉದಿತ್ ನಾರಾಯಣ್(Udit Narayan), ಮಹಿಳಾ ಅಭಿಮಾನಿಗೆ ಮುತ್ತು ಕೊಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರಂತೂ ವಿಡಿಯೋ ಬಗ್ಗೆ ಭಿನ್ನ ಭಿನ್ನ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಿಂದ ಸಂಪಾದಿಸಿಕೊಂಡು, ಕಾಪಾಡಿಕೊಂಡು ಬಂದಿದ್ದ ಗೌರವವನ್ನು ಉದಿತ್ ನಾರಾಯಣ್ ಒಂದೇ ಸೆಕೆಂಡ್​ನಲ್ಲಿ ಮಣ್ಣುಪಾಲು ಮಾಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನು ಕೆಲವರು, ವಯಸ್ಸಾದಂತೆ ಉದಿತ್ ನಾರಾಯಣ್​ಗೆ ಚಪಲ ಹೆಚ್ಚಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಉದಿತ್ ನಾರಾಯಣ್ ಅವರು ವಿಪರೀತ ಟ್ರೋಲ್ ಆಗಿದ್ದಾರೆ.

Exit mobile version