Site icon BosstvKannada

ಸಿದ್ದರಾಮಯ್ಯ ಸರ್ಕಾರದ 2ನೇ ವಿಕೆಟ್‌ ಔಟ್‌.. ಸಚಿವ ರಾಜಣ್ಣ ತಲೆ‌ದಂಡ..!

ಸಿಎಂ ಸಿದ್ದರಾಮಯ್ಯ ಸರ್ಕಾರದ ಎರಡನೇ ವಿಕೆಟ್‌ ಔಟಾಗಿದೆ. ಇದಕ್ಕೂ ಮೊದಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ರಾಜೀನಾಮೆ ನೀಡಿದ ಮೊದಲ ಸಚಿವ ಬಿ ನಾಗೇಂದ್ರ. ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದ್ರೀಗ ಸಿದ್ದರಾಮಯ್ಯ ಸರ್ಕಾರದ ಇನ್ನೊಂದು ವಿಕೆಟ್‌ ಔಟ್‌ ಆಗಿದೆ.. ಸಿಎಂ ಆಪ್ತ ಸಚಿವ ರಾಜಣ್ಣ ಸಚಿವ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.

ರಾಜೀನಾಮೆಗೆ ಸಿಎಂ ಅಂಗೀಕಾರ..!

ಸಹಕಾರ ಸಚಿವ ಕೆಎನ್‌ ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯರಿಗೆ ಪತ್ರದ ಮೂಲಕ ರಾಜೀನಾಮೆ ಅರ್ಜಿ ಸಲ್ಲಿದ್ದಾರೆ. ಈ ಅರ್ಜಿಯನ್ನು ಸಿಎಂ ಸಿದ್ದರಾಮಯ್ಯ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ರಾಹುಲ್‌ ಗಾಂಧಿಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ ಕಾರಣ ಕಾಂಗ್ರೆಸ್‌ ಹೈಕಮಾಂಡ್‌ ರಾಜೀನಾಮೆಗೆ ಸೂಚಿಸಿದೆ. ಈ ಮೇರೆಗೆ ರಾಜಣ್ಣ ತಲೆದಂಡವಾಗಿದೆ. ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಮಾಹಿತಿ ತಿಳಿಸಲಿದ್ದಾರೆ.

Exit mobile version