ಭಾರತೀಯ ಸೇನೆ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಿಒಕೆ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ನೂರಾರು ಭಯೋತ್ಪಾದಕರು ಯಮನ ಪಾದ ಸೇರಿದ್ದಾರೆ. ಇಂದು ಮುಂಜಾನೆ ನಡೆಸಿದ ವಾಯುದಾಳಿಯಲ್ಲಿ, ಭಾರತೀಯ ವಾಯುಪಡೆಯು ಪಿಒಕೆಯಲ್ಲಿ(PoK) 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತು. ಇವುಗಳಲ್ಲಿ ಬಹವಾಲ್ಪುರ್, ಮುರಿಡ್ಕೆ, ಗುಲ್ಪುರ್, ಭಿಂಬರ್, ಚಕ್ ಅಮೃ, ಬಾಗ್, ಕೋಟ್ಲಿ, ಸಿಯಾಲ್ಕೋಟ್ ಮತ್ತು ಮುಜಫರಾಬಾದ್ ಸೇರಿವೆ.
ಈ 9 ಸ್ಥಳಗಳಲ್ಲಿ ಪಾಕ್‌ನ ಖ್ಯಾತ ಕ್ರಿಕೆಟರ್ ಶೋಯೆಬ್ ಮಲಿಕ್ ( Shoaib Malik) ಅವರ ಮನೆ ಕೂಡ ಈ ದಾಳಿಯಿಂದ ಜಸ್ಟ್ ಮಿಸ್ ಆಗಿದೆ. ಸಿಯಾಲ್‌ಕೋಟ್‌ನಲ್ಲಿರುವ ಶೋಯೆಬ್ ಮಲಿಕ್ ಅವರ ಹಳ್ಳಿಯ ಮೇಲೂ ದಾಳಿ ನಡೆದಿದೆ.

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ 1982 ರಲ್ಲಿ ಸಿಯಾಲ್‌ಕೋಟ್‌ನ (Sialkot) ಜನಿಸಿದರು. ಅವರ ತಂದೆ ಮಲಿಕ್ ಫಕೀರ್ ಹುಸೇನ್ ಅಲ್ಲಿ ಒಂದು ಸಣ್ಣ ಶೂ ಅಂಗಡಿಯನ್ನು ನಡೆಸುತ್ತಿದ್ದರು. ಅದೇ ಅಂಗಡಿಯಿಂದ ಬಂದ ಗಳಿಕೆಯಿಂದ, ತಂದೆ ಮಗನ ಕ್ರಿಕೆಟಿಗನಾಗುವ ಕನಸನ್ನು ನನಸಾಗಿಸಿದರು. ಇದರೊಂದಿಗೆ ಅವರು ಸಿಯಾಲ್‌ಕೋಟ್ ತೊರೆದು ಕರಾಚಿಯಲ್ಲಿ ನೆಲೆಸಿದ್ದರು.
Also Read : Operation Sindoor : ಉಗ್ರರ ಹುಡುಕಿ ಹೊಡೆದಿದ್ದೇಗೆ ಭಾರತೀಯ ಸೇನೆ?
ಆದಾಗ್ಯೂ, ಶೋಯೆಬ್ ಮಲಿಕ್ ಎಲ್ಲೇ ನೆಲೆಸಿದ್ದರೂ, ಅವರ ಪೂರ್ವಜರ ಮನೆ ಸಿಯಾಲ್‌ಕೋಟ್‌ನಲ್ಲಿ ಇದೆ. ಸದ್ಯಕ್ಕೆ ಸಿಯಾಲ್‌ಕೋಟ್ ಸುದ್ದಿಯಲ್ಲಿದೆ. ಶೋಯೆಬ್ ಮಲಿಕ್ ಕಾರಣದಿಂದಾಗಿ ಅಲ್ಲ, ಬದಲಾಗಿ ಭಾರತೀಯ ವಾಯುದಾಳಿಗಳಿಂದಾಗಿ. ಸಿಯಾಲ್‌ಕೋಟ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (Hizbul Mujahideen Training Centre ) ತರಬೇತಿ ಕೇಂದ್ರವಿದೆ ಎಂದು ಗುಪ್ತಚರ ಮೂಲಗಳ ಮೂಲಕ ಭಾರತಕ್ಕೆ ತಿಳಿದುಬಂದಿದೆ ಎಂಬ ವರದಿಗಳಿವೆ. ಅಂತರರಾಷ್ಟ್ರೀಯ ಗಡಿಯ ಒಳಗೆ 12 ರಿಂದ 18 ಕಿಲೋಮೀಟರ್ ದೂರದಲ್ಲಿರುವ ಮೆಹ್ಮೂನ್ ತರಬೇತಿ ಕೇಂದ್ರವು ಸುದ್ದಿಯಲ್ಲಿ ಕಡಿಮೆ ಪ್ರಾಮುಖ್ಯತೆಯನ್ನು ಪಡೆದಿದೆ.