Site icon BosstvKannada

ಸ್ಟಾರ್ ವಾರ್ ಬಗ್ಗೆ ಗರಂ ಆದ ಶಿವಣ್ಣ

ಚಂದನವನದಲ್ಲಿ ಕಿಚ್ಚ ಸಾರಿದ ಯುದ್ಧದಿಂದಾಗಿ ಸ್ಟಾರ್ ವಾರ್ ಶುರುವಾಗಿದೆ. ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರು ಮಾಡಿದ್ದಾರೆ. ಈ ಮಧ್ಯೆ ನಾನು ದರ್ಶನ್ ಗೆ ಏನೂ ಅಂದಿಲ್ಲ ಅಂತಾ ಸುದೀಪ್ ಸ್ಪಷ್ಟನೆ ನೀಡಿದರೂ ವಾರ್ ಮಾತ್ರ ನಿಲ್ಲುತ್ತಿಲ್ಲ. ಇತ್ತ ವಿಜಯಲಕ್ಷ್ಮೀ ದರ್ಶನ್, ಕೆಟ್ಟ ಕಮೆಂಟ್ ಹಾಕುವವರ ವಿರುದ್ಧ ಸಿಸಿಬಿಗೆ ದೂರು ಸಲ್ಲಿಸಿದ್ದಾರೆ. ಇದರಲ್ಲಿ ಸುದೀಪ್ ಫ್ಯಾನ್ಸ್ ಗಳೇ ಹೆಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೆಲ್ಲ ಗಮನಿಸಿದ ಶಿವಣ್ಣ ಗರಂ ಆಗಿದ್ದಾರೆ.

ಶಿವರಾಜ್‌ಕುಮಾರ್ (Shiva Rajkumar) ಅಭಿನಯದ `45′ ಸಿನಿಮಾ ಕೂಡ ಇಂದು ತೆರೆ ಕಂಡಿದೆ. ಇನ್ನೊಂದೆಡೆ ಸುದೀಪ್ ಅಭಿನಯದ ಮಾರ್ಕ್ ತೆರೆಗೆ ಅಪ್ಪಳಿಸಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಮ, ಯಾರ ಮನೆಯನ್ನೂ ಒಡೆಯೋಕೆ ಹೋಗಬಾರದು. ಯಾರ ಭಾವನೆಗಳ ಜೊತೆಗೂ ಆಟ ಆಡಬಾರದು. ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಬದುಕೋಣ, ಬದುಕೋಕೆ ಬಿಡೋಣ ಎಂಬ ಭಾವನೆ ಎಲ್ಲರಿಗೂ ಇರಬೇಕು. ಸಮಾಜ ಇಷ್ಟೇ. ಎಷ್ಟು ದಿನ ಇರುತ್ತೇವೆ, ಅಷ್ಟು ದಿನ ನಾವೆಲ್ಲರೂ ಅನ್ಯೋನ್ಯವಾಗಿ ಹೊಂದಿಕೊಂಡು ಇರಬೇಕು ಎಂಬುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

Exit mobile version