BosstvKannada

Shefali Jariwala : ಹುಡುಗರು ಜೊತೆ ಕುಣಿದ ಪಂಕಜಾ ಇನ್ನಿಲ್ಲ!

ಕಾಂಟಾ ಲಗಾ ಖ್ಯಾತಿಯ ಶೆಫಾಲಿ ಜರಿವಾಲಾ (Shefali Jariwala) ಅವರ ಹಠಾತ್ ಸಾವು ಬಣ್ಣದ ಲೋಕವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. 2000ರ ದಶಕದಲ್ಲಿ ತಮ್ಮ ರೀಮಿಕ್ಸ್ ವಿಡಿಯೋ ಕಾಂತ ಲಗಾ ಮೂಲಕ ಶೆಫಾಲಿ ಜರಿವಾಲಾ ಬಹಳ ಪ್ರಸಿದ್ಧರಾದ್ರು. ಬಳಿಕ ಸ್ಟಾರ್ ನಟ ಸಲ್ಮಾನ್ ಖಾನ್ ಸೇರಿದಂತೆ ಹಲವು ನಟರ ಜೊತೆ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಹಿಂದಿ ಬಿಗ್​ ಬಾಸ್​ 13ರ ಸ್ಪರ್ಧಿಯಾಗಿದ್ದ ಶೆಫಾಲಿ ಜರಿವಾಲಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

VC :ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್​ ಶೆಫಾಲಿ ಜರಿವಾಲಾ ಅವರು ತಡರಾತ್ರಿ Cardiac Arrestನಿಂದ ನಿಧನ ಹೊಂದಿದ್ದಾರೆ. ಸದ್ಯ ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್‌ನ ನಟ, ನಟಿಯರು ಬಿಗ್ ಶಾಕ್‌ಗೆ ಒಳಗಾಗಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ​ಕುಮಾರ್ ನಟನೆಯ ಹುಡುಗರು ಸಿನಿಮಾದಲ್ಲಿ ಪಂಕಜಾ ಸಾಂಗಿಗೆ ಶೆಫಾಲಿ ಜರಿವಾಲಾ ಹೆಜ್ಜೆ ಹಾಕಿದ್ದರು.

ಇನ್ನು ನಟಿ​ ಶೆಫಾಲಿ ಜರಿವಾಲಾ ಅವರಿಗೆ ತಡರಾತ್ರಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಪತಿ ಪರಾಗ್ ತ್ಯಾಗಿ ಹಾಗೂ ಮೂವರು ವ್ಯಕ್ತಿಗಳು ಮುಂಬೈ ನಗರದ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಲಾಗಿತ್ತು. ಆದರೆ ಆದಾಗಲೇ ನಟಿಯ ಉಸಿರು ನಿಂತು ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

VC : 2002ರಲ್ಲಿ ಕಾಂತ ಲಗಾ ಎನ್ನುವ ಹಾಡಿನ ಮೂಲಕ ಶೆಫಾಲಿ ಜರಿವಾಲಾ ಹೆಚ್ಚು ಪ್ರಖ್ಯಾತಿಯನ್ನು ಪಡೆದಿದ್ದರು. ಹಿಂದಿ ಬಿಗ್​ಬಾಸ್- 13ರಲ್ಲಿ ಶೆಫಾಲಿ ಕಾಣಿಸಿಕೊಂಡಿದ್ದರು. ಶೆಫಾಲಿ ಜರಿವಾಲಾ ಹಾಗೂ ಉತ್ತರ ಪ್ರದೇಶ ಮೂಲದ ಪರಾಗ್ ತ್ಯಾಗಿ ಅವರು 2014ರಲ್ಲಿ ಮದುವೆಯಾಗಿದ್ದರು. ಇದಾದ ಮೇಲೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

ಪರಾಗ್ ತ್ಯಾಗಿ, ಶೆಫಾಲಿ ಜರಿವಾಲಾ ಟೆಲಿವಿಷನ್​ ಹಾಗೂ ಸಿನಿಮಾ ಎರಡರಲ್ಲೂ ಕೆಲಸ ಮಾಡುತ್ತಿದ್ದರು. ಕನ್ನಡದ’ಹುಡುಗರು ತೊಂದ್ರೆ ಇಲ್ಲ ಪಂಕಜಾ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗಿ ಜೊತೆ ಬಿಂದಾಸ್‌ ಆಗಿ ಹೆಜ್ಜೆ ಹಾಕಿದ್ದಾ ನಟಿ ಈಗ ಹಿಳಿವಯಸ್ಸಿಗೆ ನಿಧನವಾಗಿದ್ದು, ಇದರಿಂದ ಇಡೀ ಬಾಲಿವುಡ್‌ ಶೋಕ ಸಾಗರದಲ್ಲಿ ಮುಳುಗಿದೆ.

Exit mobile version