ನಟ ಪುನೀತ್ ರಾಜ್‌ಕುಮಾರ್ ಅವರ ಹುಡುಗರು ಚಿತ್ರದಲ್ಲಿ ನಟಿ ಶೆಫಾಲಿ ಜರಿವಾಲಾ ಮಸ್ತ್ ಡ್ಯಾನ್ಸ್ ಮಾಡಿದ್ರು. ತೊಂದರೆ ಇಲ್ಲ ಪಂಕಜಾ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಜೂನ್ 27ರಂದೇ ತೀವ್ರ ಅಸ್ವಸ್ಥರಾಗಿದ್ರು ಎನ್ನಲಾಗ್ತಿದೆ. ಖ್ಯಾತ ನಟಿ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದು, ಬಾಲಿವುಡ್ ಶಾಕ್‌ಗೆ ಒಳಗಾಗಿದೆ.
ಪುನೀತ್ ರಾಜ್‌ಕುಮಾರ್ ಜೊತೆ ‘ನಾ ಬೋರ್ಡು ಇರದ ಬಸ್ಸನು..’ ಹಾಡಿಗೆ ನಟಿ ಶೆಫಾಲಿ ಜರಿವಾಲಾ, ಹಲವು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ರು. ನಟಿ ಸಾವಿನ ಸುದ್ದಿ ಕೇಳಿ ಚಿತ್ರರಂಗಕ್ಕೆ ಆಘಾತವಾಗಿದೆ. ಅನೇಕ ಸಹನಟರು ಸಂತಾಪ ಸೂಚಿಸಿದ್ದಾರೆ.
42 ವರ್ಷಕ್ಕೆ ಕೊಲೆಯುಸಿರೆಳೆದ ಶೆಫಾಲಿ ಜರಿವಾಲಾ ‘ಬಿಗ್ ಬಾಸ್’ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲೂ ಶೆಫಾಲಿ ಜರಿವಾಲಾ ಭಾಗಿಯಾಗಿದ್ದರು. ನಟಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಕುಸಿತ ನಟಿಯನ್ನ ತಕ್ಷಣ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ರು.
ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ನಿಧನ
ಶೆಫಾಲಿಯವರ ಪತಿ ಮತ್ತು ನಟ ಪರಾಗ್ ತ್ಯಾಗಿ ಸೇರಿದಂತೆ ಮೂವರು ನಟಿಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆ ತಲುಪುವ ಮೊದಲೇ ಶೆಫಾಲಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ನಟಿ ಶೆಫಾಲಿ ಜರಿವಾಲ್ ತಮ್ಮ ಇತ್ತೀಚಿನ ಸಂದರ್ಶನ ವೊಂದರಲ್ಲಿ ತಾವು ಕೆಲ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು.
ಶೆಫಾಲಿ ಕುಟುಂಬದಿಂದ ಇದುವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ಆರಂಭಿಕ ಮಾಧ್ಯಮ ವರದಿಗಳು ನಟಿ ಹೃದಯಾಘಾತದಿಂದ ನಿಧನರಾದರು ಎಂದು ಹೇಳಲಾಗ್ತಿದೆ. 2000 ರ ದಶಕದಲ್ಲಿ ‘ಕಾಂಟಾ ಲಗಾ’ ರೀಮಿಕ್ಸ್ ವೀಡಿಯೊದೊಂದಿಗೆ ನಟಿ ಪ್ರತಿ ಮನೆಯಲ್ಲೂ ಜನಪ್ರಿಯರಾಗಿದ್ದರು.

