Site icon BosstvKannada

ಶರಣಬಸಪ್ಪ ಅಪ್ಪ ಇನ್ನಿಲ್ಲ.. ಮಹಾದಾಸೋಹಿಗೆ ಆಗಿದ್ದೇನು? ಭಕ್ತರಿಗೆ ಬರಸಿಡಿಲು..!

ಶರಣರ ನಾಡು ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸಪ್ಪ ಅಪ್ಪ ಲಿಂಗೈಕ್ಯರಾಗಿದ್ದಾರೆ. 91 ವರ್ಷದ ಶರಣಬಸಪ್ಪ ಅಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಕಲಬುರಗಿಯ ಮಹಾ ಶರಣರ ಲಿಂಗೈಕ್ಯ
ಶರಣರ ನಾಡು ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸಪ್ಪ ಅಪ್ಪ ಲಿಂಗೈಕ್ಯರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಸ್ರಾರು ಬಾಳಿಗೆ ಬೆಳಕಾಗಿದ್ದ ಮಹಾ ಶರಣ ಈಗ ಕೋಟ್ಯಂತರ ಭಕ್ತರನ್ನ ಬಿಟ್ಟು ಬಾರದೂರಿಗೆ ತೆರಳಿದ್ದಾರೆ.. ಹೌದು.. 91 ವರ್ಷದ ಶರಣಬಸಪ್ಪ ಅಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಅವರನ್ನು ಮಠಕ್ಕೆ ಶಿಫ್ಟ್ ಮಾಡಿಲಾಗಿತ್ತು. ಆದ್ರೆ, ದಿವ್ಯ ಪೀಠದಲ್ಲೇ ಮಹಾ ಶರಣರು ಶಿವನ ಸನ್ನಿಧಿ ಸೇರಿದ್ದಾರೆ..

ಶರಣಬಸಪ್ಪ ಅಪ್ಪಗೆ ಕಾಡುತ್ತಿತ್ತು ನ್ಯುಮೋನಿಯಾ..!
ಕಲಬುರಗಿಯ ಶರಣ ಬಸವೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಯಾಗಿದ್ದ ಡಾ. ಶರಣಬಸಪ್ಪ ಅಪ್ಪ ಅವರು ಕಳೆದ ತಿಂಗಳು ಜುಲೈ 26 ರಂದು ವಯೋಸಹಜ ಕಾಯಿಲೆ ಮತ್ತು ನ್ಯುಮೋನಿಯಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶರಣಬಸಪ್ಪ ಅಪ್ಪ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದ್ದು, ತೀವ್ರ ಅಸ್ವಸ್ಥರಾಗಿದ್ದರು. ಹೀಗಾಗಿ ಗೃಹ ಆರೈಕೆಗೆ ಕುಟುಂಬಸ್ಥರು ನಿರ್ಧರಿಸಿದ್ದರು. ರಾತ್ರಿ ಕಲಬುರಗಿಯ ಖಾಸಗಿ ಆಸ್ಪತ್ರೆಯಿಂದ ಅವರನ್ನು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಶರಣಬಸಪ್ಪ ಅಪ್ಪ ಅವರು ಕೊನೆಯುಸಿರೆಳೆದಿದ್ದಾರೆ. ಇದೀಗ ಚಿಕಿತ್ಸೆ ಫಲಿಸದೇ, ಕೋಟಿ ಕೋಟಿ ಭಕ್ತರ ಪ್ರಾರ್ಥನೆ ಫಲ ನೀಡದೇ ಮಹಾ ದಾಸೋಹಿ ಕೊನೆಯುಸಿರೆಳೆದಿದ್ದು, ಅನುಯಾಯಿಗಳಿಗೆ ಬರಸಿಡಿಲೇ ಬಡಿದಂತಾಗಿದೆ..

ಕೊನೆ ಆಸೆ ಈಡೇರಿಸಿಕೊಂಡ ಮಹಾದಾಸೋಹಿ!
ತಮ್ಮ ಅಂತಿಮ ಇಚ್ಛೆಯಂತೆ, ಅಪ್ಪಾಜಿಯವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಆರೋಗ್ಯಕರ ಉಸಿರಾಟದ ಸ್ಥಿತಿಯಲ್ಲಿ ಕೊಂಡೊಯ್ಯಲಾಯಿತು. ಅಲ್ಲಿ ಅಪ್ಪಾಜಿಯವರು ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು ಹಾಗೂ ಆರತಿ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿ ಪ್ರದಕ್ಷಿಣೆ ಮಾಡಲಾಯಿತು. ಬೆಳಗ್ಗಿನಷ್ಟರಲ್ಲೇ ಅಪ್ಪಾಜಿಯವರ ಜೀವ ಚಟುವಟಿಕೆಗಳು ಅತ್ಯಂತ ಗಂಭೀರವಾಗಿದ್ದರೂ, ಅವರು ಸಂತೋಷದಿಂದ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸಮಯ ಕಳೆದ್ರು. ತಮ್ಮ ಅಂತಿಮ ಇಚ್ಛೆಯಂತೆ, ಅಪ್ಪಾಜಿಯವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಅಪ್ಪಾಜಿಯವರು ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು. ನಂತರ ಆರತಿ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿ ಪ್ರದಕ್ಷಿಣೆ ಮಾಡಲಾಯಿತು.

ದಾಸೋಹ ವೀಕ್ಷಿಸಿದ್ದ ಮಹಾಯೋಗಿ..!
ಸಂಜೆ ಸುಮಾರು 7:30ಕ್ಕೆ ಅಪ್ಪಾಜಿಯವರನ್ನು ದಾಸೋಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ದಿನದ ಮೊದಲಾರ್ಧದಲ್ಲೇ ತಾತ್ಕಾಲಿಕ ಐಸಿಯು ಸಿದ್ಧಪಡಿಸಲಾಗಿತ್ತು. ಅಂತಿಮ ಉಸಿರಿನವರೆಗೂ ಸಮರ್ಪಿತ ವೈದ್ಯಕೀಯ ತಂಡದ ಕಾಳಜಿಯಲ್ಲಿ ಎಲ್ಲಾ ಚಿಕಿತ್ಸಾ ಮತ್ತು ಸಹಾಯಕ ಔಷಧೋಪಚಾರ ಮುಂದುವರೆಸಲಾಯಿತು, ಅಪ್ಪಾಜಿಯವರ ಆರಾಮಕ್ಕಾಗಿ ಅತ್ಯುತ್ತಮ ಪ್ಯಾಲಿಯೇಟಿವ್ ಚಿಕಿತ್ಸೆ ನೀಡಲಾಯಿತು. ಆದ್ರೆ ಇದೆಲ್ಲಾ ಆದ ನಂತರ ಪರಮ ಪೂಜ್ಯ ಡಾ. ಶ್ರೀ ಶರಣಬಸಪ್ಪ ಅಪ್ಪಾಜಿ ಅವರು 14 ಆಗಸ್ಟ್ 2025, ರಾತ್ರಿ 9:23ಕ್ಕೆ ಶಾಂತಿಯುತವಾಗಿ ಪರಮ ಧಾಮಕ್ಕೆ ಪ್ರಯಾಣಿಸಿದ್ದಾರೆ..

ಅಪ್ಪಾಜಿ ಅಗಲಿಕೆ.. ಮಠದಿಂದ ಮನವಿ
ಇನ್ನು, ಶ್ರೀ ಶರಣಬಸಪ್ಪ ಅಪ್ಪಾ ಅಗಲುತ್ತಿದ್ದಂತೆ ಮಠದ ಕಡೆಯಿಂದ ಮಾಹಿತಿ ನೀಡಲಾಯಿತು. ಅಪ್ಪಾಜಿಯವರು ನಮ್ಮ ಹೃದಯಗಳಲ್ಲಿ ಮತ್ತು ಭಕ್ತರ ಭಾವನೆಯಲ್ಲಿ ಸದಾಕಾಲ ಅಮರರಾಗಿದ್ದಾರೆ. ಎಲ್ಲಾ ಭಕ್ತರೂ ಅವರ ಆತ್ಮಶಾಂತಿಗಾಗಿ ಪ್ರಾರ್ಥನೆ ನಡೆಸಿ, ದೇವಾಲಯದಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವಂತೆ ವಿನಂತಿಸುತ್ತೇವೆ ಅಂತ ಮಠದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶರಣಬಸವೇಶ್ವರ ಸಂಸ್ಥಾನಕ್ಕಿದೆ 200 ವರ್ಷದ ಇತಿಹಾಸ!
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನವು 200 ವರ್ಷಗಳಿಗೂ ಹೆಚ್ಚಿನ ಶ್ರೀಮಂತ ಇತಿಹಾಸ ಹೊಂದಿರುವ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. ಇದನ್ನು 18 ನೇ ಶತಮಾನದ ಸಂತ ಶ್ರೀ ಶರಣಬಸವೇಶ್ವರರು ಸ್ಥಾಪಿಸಿದರು. ಇದು ಈ ಪ್ರದೇಶದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಉನ್ನತಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿ. ಲಿಂಗಾಯತ ಭಕ್ತರ ಪ್ರಮುಖ ಯಾತ್ರಾ ಸ್ಥಳವಾದ ಕಲಬುರಗಿಯಲ್ಲಿರುವ ಶರಣಬಸವೇಶ್ವರ ದೇವಸ್ಥಾನದೊಂದಿಗೆ ಸಂಸ್ಥಾನವು ಸಂಬಂಧ ಹೊಂದಿದೆ. ಡಾ. ಶರಣಬಸಪ್ಪ ಅಪ್ಪ ಅವರು ಕಲಬುರಗಿಯ ಪ್ರಸಿದ್ಧ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಆಗಿದ್ದರು.

ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಶರಣರು!
ಇನ್ನು, ಶರಣಬಸಪ್ಪ ಅಪ್ಪ ಅವರ ಸಮಾಜ ಸೇವೆಗೆ ಹಲವು ಪ್ರಶಸ್ತಿಗಳು ಒಲಿದು ಬಂದಿದ್ದವು. ಕರ್ನಾಟಕ ಸರ್ಕಾರದಿಂದ 1988ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.1999ರಲ್ಲಿ ಗುಲಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. ಹಲವಾರು ವರ್ಷಗಳ ಕಾಲ ಧಾರವಾಡ ವಿವಿ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಲಲಿತ ಕಲಾ ಅಕಾಡೆಮಿ ವತಿಯಿಂದ ಕಲಾ ಪೋಷಿತ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಇದೀಗ ಧೀಮಂತ ಶರಣರ ಅಗಲಿಕೆಯಿಂದ ಕರುನಾಡು ಬಡವಾಗಿದೆ.. ಕೋಟಿ ಕೋಟಿ ಭಕ್ತ ವೃಂದ ಶೋಕಸಾಗರದಲ್ಲಿ ಮುಳುಗಿದೆ.

Read Also :

Exit mobile version