Site icon BosstvKannada

ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳಿಗಾಗಿ ಆಯ್ಕೆಯಾಗಿರುವ ಕ್ರೀಡಾಂಗಣ ಇವೆ ನೋಡಿ!

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಈಗಾಗಲೇ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಹೀಗಾಗಿ ಮಹಿಳಾ ಕ್ರಿಕೆಟ್ ಕ್ರೇಜ್ ಕೂಡ ದೇಶದಲ್ಲಿ ಹೆಚ್ಚಾಗಿದೆ. ಏಕದಿನ ವಿಶ್ವಕಪ್ ಗೆದ್ದಿರುವ ಮಹಿಳಾ ತಂಡ ಈಗ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಅದಕ್ಕೂ ಮುಂಚೆ ಡಬ್ಲ್ಯೂಪಿಎಲ್ ಸೆಣಸಾಟಕ್ಕೆ ಸಿದ್ಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚರ್ಚೆಗಳು ಕೂಡ ಜೋರಾಗಿವೆ.

ಪುರುಷರ ಟಿ20 ವಿಶ್ವಕಪ್ ಗೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಸೀಸನ್ ನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಕೇವಲ ಎರಡು ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಡಬ್ಲ್ಯೂಪಿಎಲ್ 2026ರ ಟೂರ್ನಿ ಮುಂಬೈ ಹಾಗೂ ಬರೋಡದಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

2026ರ ಟಿ20 ವಿಶ್ವಕಪ್ ಫೆ. 7ರಿಂದ ಆರಂಭವಾಗಲಿದೆ. ಹೀಗಾಗಿ ಅದಕ್ಕೂ ಮುಂಚೆಯೇ ಮಹಿಳೆಯರ ಪ್ರೀಮಿಯರ್ ಲೀಗ್ ಮುಗಿಸಬೇಕು ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ. ಹೀಗಾಗಿ ವುಮೆನ್ಸ್ ಪ್ರೀಮಿಯರ್ ಲೀಗ್ 2026 ಜನವರಿ 7 ರಿಂದ ಶುರುವಾಗಲಿದ್ದು, ಫೆಬ್ರವರಿ 3ಕ್ಕೆ ಅಂತ್ಯವಾಗಲಿದೆ. ಫೆಬ್ರವರಿಯ ಮೊದಲ ವಾರದಲ್ಲೇ WPL ಟೂರ್ನಿಗೆ ತೆರೆ ಎಳೆಯಲು ಬಿಸಿಸಿಐ ನಿರ್ಧರಿಸಿದ್ದು, ಸದ್ಯದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ.

ಇದಕ್ಕಾಗಿ ವುಮೆನ್ಸ್ ಪ್ರೀಮಿಯರ್ ಲೀಗ್ ಗೆ ಹರಾಜು ನಡೆಸಲು ಕೂಡ ತಯಾರಿ ನಡೆದಿದೆ. ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೈನ್ ಪಟ್ಟಿಯನ್ನು ಸಲ್ಲಿಸಿದ್ದು, ಇನ್ನುಳಿದ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯು ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಕೇವಲ 73 ಆಟಗಾರ್ತಿಯರಿಗೆ ಮಾತ್ರ ಅವಕಾಶ ದೊರೆಯಲಿದೆ. ಕಾರಣ ಬಹುತೇಕ ಫ್ರಾಂಚೈಸಿಗಳು ತಮ್ಮ ಸ್ಟಾರ್ ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಂಡಿದ್ದು, 73 ಸ್ಲಾಟ್ಗಳು ಮಾತ್ರ ಖಾಲಿ ಇವೆ.

Exit mobile version