ಮೊಡವೆಗಳ ಥರಾನೆ ವೈಟ್‌ಹೆಡ್ಸ್ ಕೂಡ ಮುಖದ ಅಂದವನ್ನ ಹಾಳುಮಾಡುತ್ವೆ. ಸಾಮಾನ್ಯವಾಗಿ ಈ ವೈಟ್‌ಹೆಡ್ಸ್ ಮೂಗು, ಹಣೆ ಮತ್ತು ಚಿನ್ ಅಂದ್ರೆ ತುಟಿಯ ಕೆಳಗಿನ ಭಾಗದಲ್ಲಿ ಕಾಣಿಸಿಕೊಳ್ಳುತ್ವೆ. ಇದು ನೋಡೋಕೆ ಚಿಕ್ಕ ಚಿಕ್ಕ ಪಿಂಪಲ್ಸ್ ಥರಾನೆ ಇರುತ್ತೆ. ಈ ಹೋಮ್ ರೆಮಿಡೀಸ್ ಮೂಲಕ ವೈಟ್‌ಹೆಡ್ಸ್‌ಅನ್ನ ಕಡಿಮೆ ಮಾಡ್ಕೋಬೋದು. ಮೊದ್ಲು ಬಿಸಿನೀರಿನ ಹಬೆ ತೊಗೊಳಿ. ನಂತ್ರ ಒಂದು ಸ್ಕ್ರಬ್ ಪ್ರಿಪೇರ್ ಮಾಡಿ. ಎರಡು ಚಮಚ ಕಾಫಿ ಪೌಡರ್ ಎರಡು ಚಮಚ ಸಕ್ಕರೆ, ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ನೀರನ್ನ ಹಾಕಿ ಸ್ಕ್ರಬ್ ತಯಾರಿಸಿ.
ಇದನ್ನ ವೈಟ್‌ಹೆಡ್ಸ್ ಇರುವ ಜಾಗಕ್ಕೆ ಹಚ್ಚಿ ಒಂದೆರಡು ನಿಮಿಷ ಮಸಾಜ್ ಮಾಡಿ, ಹತ್ತು ನಿಮಿಷದ ಬಳಿಕ ವಾಶ್ ಮಾಡಿ. ಮುಖವನ್ನ ಸ್ಕ್ರಬ್ ಮಾಡಿದ್ ನಂತ್ರ ಪೋರ್ಸ್ ಓಪನ್ ಆಗುತ್ತೆ, ಈ ಪೋರ್ಸ್‌ಅನ್ನ ಮುಚ್ಚೋದಿಕ್ಕೆ ಐಸ್‌ಕ್ಯೂಬ್‌ನಿಂದ ಮುಖವನ್ನ ಮಸಾಜ್ ಮಾಡಿ. ಈ ರೀತಿ ವಾರದಲ್ಲಿ ಒಂದು ದಿನ ಮಾಡಿದ್ರೆ ವೈಟ್‌ಹೆಡ್ಸ್ ಸಮಸ್ಯೆ ಕಡಿಮೆಯಾಗುತ್ತೆ. ಹಾಗೆ ಬ್ಲ್ಯಾಕ್‌ಹೆಡ್ಸ್ ಇದ್ರೆ ಅದು ಕೂಡ ಕಡಿಮೆಯಾಗುತ್ತೆ.
Also Read: ಮತ್ತೆ ವಕ್ಕರಿಸಿದ Covid..! ಲಾಕ್‌ಡೌನ್ ಭೂತ ಶುರು..!?
ಇನ್ನು ಆಗಾಗ ವೈಟ್‌ಹೆಡ್ಸ್ ಆಗ್ಬಾರ್ದು ಅಂದ್ರೆ ಮುಖವನ್ನ ಆದಷ್ಟು ಕ್ಲೀನ್ ಆಗಿಟ್ಕೊಳಿ. ರಾತ್ರಿ ಮಲಗೋ ಮುನ್ನ ಜೆಂಟಲ್ ಫೇಸ್‌ವಾಶ್ ಬಳಸಿ ಮುಖವನ್ನ ತೊಳೆಯಿರಿ. ಹಾಗೆ, ಮೇಕಪ್ ಮಾಡ್ಕೊಂಡಿದ್ರೆ ಅದನ್ನ ರಿಮೂವ್ ಮಾಡಿ ಮಲ್ಕೊಳಿ. ಮೇಕಪ್ ಹಾಕ್ಕೊಂಡು ಮಲಗೋದ್ರಿಂದ ಸ್ಕಿನ್‌ಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ. ಸೋ ಈ ಟಿಪ್ಸ್ ಅನ್ನ ಫಾಲೋ ಮಾಡಿ.

