Site icon BosstvKannada

ಅಮ್ಮನಿಗೆ ಕೊಟ್ಟಿದ್ದ ಮಾತು, ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ

ಆರು ದಶಕಗಳಿಗೂ ಹೆಚ್ಚು ಅಭಿನಯದಲ್ಲಿ ಆರ್ಭಟಿಸಿ ಮಿಂಚಿದ್ದ ನಟಿ ಸರೋಜಾ ದೇವಿ ಕೊನೆಯುಸಿರೆಳೆದಿದ್ದಾರೆ.. 5 ಭಾಷೆಗಳಿಂದ ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ಸರೋಜಾ ಇದೀಗ ಇಹಲೋಕ ತ್ಯಜಿಸಿದ್ದಾರೆ.. ಆದ್ರೆ ಬದುಕಿದ್ದಾಗ ಅವರು ಮಾಡುತ್ತಿದ್ದ ಕಾರ್ಯ, ನಡವಳಿಕೆ ಅವರ ಮೇಲಿದ್ದ ಗೌರವವನ್ನು ಇನ್ನಷ್ಟು ಹೆಚ್ಚಿಸಿದ್ದು ಸುಳ್ಳಲ್ಲ.. ಇದೀಗ ಅದಕ್ಕೂ ಪೂರಕವೆಂಬಂತೆ ಸರೋಜಾ ದೇವಿ ತನ್ನ ಅಮ್ಮನಿಗೆ ಕೊಟ್ಟಿದ್ದ ಮಾತು, ಕೊನೆವರೆಗೂ ಆ ಮಾತು ಉಳಿಸಿಕೊಂಡಿರುವ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.. ಅಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ರೂ, ಗಗನದೆತ್ತರಕ್ಕೆ ಖ್ಯಾತಿ ಪಡೆದಿದ್ರೂ ಒಂದು ದಿನವೂ ಅವರು ಆ ಮಾತು ತಪ್ಪಲಿಲ್ಲ..

ಮೂಲತಃ ಬೆಂಗಳೂರಿನವರಾಗಿದ್ದ ಸರೋಜಾ ತನ್ನ ತಂದೆಯ ಪ್ರೋತ್ಸಾಹದಿಂದ ನಟನೆಗೆ ಬರಲು ಸಿದ್ಧರಾಗ್ತಾರೆ.. ಆದ್ರೆ ಅವರ ತಾಯಿ ಮಾತ್ರ ಸಿನಿಮಾ ರಂಗಕ್ಕೆ ಪ್ರವೇಶಿಸಬೇಕಾದ್ರೆ ಕೆಲವು ನಿಯಮಗಳನ್ನ ಪಾಲಿಸಬೇಕು ಅಂತ ಆಜ್ಞೆ ಕೊಡ್ತಾರೆ.. ಅದ್ರಂತೆ ಯಾವ ಸಿನಿಮಾದಲ್ಲೂ ತೋಳಿಲ್ಲದ ಬ್ಲೌಸ್‌, ಈಜು ಉಡುಗೆಯನ್ನ ತೊಡಬಾರದು ಅಂತ ಅವರ ಅಮ್ಮ ಹೇಳ್ತಾರಂತೆ.. ಅದನ್ನೆ ವೇದವಾಕ್ಯ ಎಂದು ಪರಿಗಣಿಸಿದ್ದ ಸರೋಜಾ ಕೊನೆವರೆಗೂ ಆ ಮಾತು ತಪ್ಪಲಿಲ್ಲ.. ತಮ್ಮ ವೃತ್ತಿಜೀವನದಲ್ಲಿ ಕಟ್ಟುನಿಟ್ಟಾದ ಡ್ರೆಸ್‌ಕೋಡ್‌ನ್ನೇ ಪಾಲಿಸಿಕೊಂಡು ಬಂದ್ರು.. ಅವರ ಈ ಒಂದು ಗುಣ ಅಭಿಮಾನಿ ಬಳಗವನ್ನ ಮತ್ತಷ್ಟು ಸೆಳೆಯಿತು. ಅಂದಹಾಗೆ 17ನೇ ವಯಸ್ಸಿಗೆ ಸರೋಜಾ ನಟನೆಗೆ ಎಂಟ್ರಿ ಕೊಟ್ಟಿದ್ರು. ಅವರ ತಂದೆ ಮೈಸೂರಿನಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ರೆ, ತಾಯಿ ಗೃಹಿಣಿಯಾಗಿದ್ರು.

Exit mobile version