Site icon BosstvKannada

ಸಚಿನ್‌ ತೆಂಡೂಲ್ಕರ್‌ ಎದುರೇ ಸಾರಾ-ಗಿಲ್‌ ಕಣ್‌ ಸಲಿಗೆ!

ಟೀಂ ಇಂಡಿಯಾದ ಟೆಸ್ಟ್ ನಾಯಕ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಡುವಿನ ರಿಲೇಶನ್‌ಶಿಫ್ ಬಗ್ಗೆ ಆಗ್ಗಾಗ್ಗೆ ಕೇಳಿಬರುತ್ತಿರುತ್ತದೆ. ಆದರೆ ಇಬ್ಬರ ನಡುವೆ ಬ್ರೇಕಪ್ ಆಗಿತ್ತು ಎಂಬ ಸುದ್ದಿ ಕಳೆದ ವರ್ಷ ವರದಿಯಾಗಿತ್ತಾದರೂ ಇದೀಗ ಮತ್ತೆ ಇಬ್ಬರೂ ಸಹ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಸದ್ಯ ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗಾಗಿ ಆಂಗ್ಲರ ನಾಡಿನಲ್ಲಿದೆ. ಇದರ ನಡುವೆ ಲಂಡನ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ YouWeCan ಫೌಂಡೇಶನ್‌ಗಾಗಿ ದತ್ತಿ ಭೋಜನ ಕೂಟವನ್ನು ಆಯೋಜಿಸಿದ್ದರು. ಈ ವೇಳೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕ್ರಿಕೆಟ್‌ ಲೋಕದ ಗಣ್ಯರು, ಭಾರತ ತಂಡದ ಆಟಗಾರರು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಶುಭ್‌ಮನ್‌ ಗಿಲ್‌ ಹಾಗೂ ಸಾರಾ ತೆಂಡೂಲ್ಕರ್ ಸಹ ಆಗಮಿಸಿದ್ದರು. ಅಲ್ಲದೇ ಇವರಿಬ್ಬರ ಫೋಟೋ ಸಹ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ಸಾರಾ ತೆಂಡೂಲ್ಕರ್ ಕುಳಿತಿರುವ ವೇಳೆ ಅಲ್ಲಿಂದಲೇ ಹಾದು ಹೋಗುವಾಗ ಶುಭ್‌ಮನ್‌ ಗಿಲ್‌ ಸಹ ಸಾರಾ ಅವರ ಕಡೆ ತಿರುಗಿ ಸ್ಮೈಲ್‌ ಮಾಡುತ್ತಿರುವ ಫೋಟೋ ವೈರಲ್‌ ಆಗಿದೆ. ಅಲ್ಲದೇ ಸಾರಾ ಸಹ ಈ ಕಾರ್ಯಕ್ರಮದ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಫೋಟೋಗೆ ಫೋಸ್‌ ನೀಡಿದ್ದಾರೆ. ಇದರ ಜತೆಗೆ ಜಡೇಜಾ, ಪಂತ್‌, ರಾಹುಲ್‌ ಸಹ ಗಿಲ್‌ಗೆ ಅದೇ ವೇಳೆ ರೇಗಿಸಿದ್ದಾರೆ. ಸದ್ಯ ಈ ವಿಡಿಯೋ ಸಖ್ಖತ್‌ ವೈರಲ್‌ ಆಗಿದೆ.

ಇನ್ನು, ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಅವರೊಂದಿಗಿನ ಸಂಬಂಧ ಬಗ್ಗೆ ಕಳೆದೆರಡು ವರ್ಷಗಳಿಂದಲೂ ಸಹ ಊಹಾಪೋಹಗಳು ಹರಿದಾಡುತ್ತಲೇ ಇವೆ. ಆದರೆ ಇದರ ಬಗ್ಗೆ ಇವರಿಬ್ಬರೂ ಈವರೆಗೆ ಯಾವುದೇ ಪ್ರತಿಕ್ರೀಯೆ ನೀಡಿಲ್ಲ. ಈ ಹಿಂದೆ ಇಬ್ಬರೂ ಸಹ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಫಾಲೋ ಮಾಡುತ್ತಿದ್ದರು. ಅಲ್ಲದೇ ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನೂ ಮಾಡುತ್ತಿದ್ದರು. ಹೀಗಾಗಿ ಅವರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಹರಡಿದ್ದವು.

Exit mobile version