Sai Layout: ಧಾರಾಕಾರವಾಗಿ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗಿದ ಪರಿಣಾಮ ಸಾಕಷ್ಟು ಬಡಾವಣೆ ಜನರ ಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ನಿವಾಸಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ವಿಪರೀತವಾಗಿ ಮಳೆ ಬಂತು ಅಂದ್ರೆ ಸಾಕು ಸಾಯಿಲೇಔಟ್ ಪೂರ್ತಿ ಜಲಾವೃತ ಆಗಿಬಿಡುತ್ತೆ. ಮಳೆ ಬಂದರೆ ಸಾಯಿಲೇಔಟ್ ಜನರಿಗೆ ಜಲಬವಣೆ ತಪ್ಪಿದ್ದಲ್ಲ. ಹೀಗೆ ನಿನ್ನೆ ಇಡೀ ರಾತ್ರಿ ಸುರಿದ ಭಾರೀ ಮಳೆಯಿಂದ ಸಾಯಿ ಲೇಔಟ್​ನಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ತಾಯಿ ಹಾಗೂ ಮಗು ಸಿಕ್ಕಿಹಾಕಿಕೊಂಡಿದ್ದರು.

ಆ ಕೂಡಲೇ ಸಿವಿಲ್ ಡಿಫೆನ್ಸ್ ಸಿಬ್ಬಂದಿ ದೌಡಾಯಿಸಿ ಬೋಟಿಂಗ್ ಮೂಲಕ ರಕ್ಷಣಾ ಕಾರ್ಯಚರಣೆ ನಡೆಸಿ ಐದು ತಿಂಗಳ ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಷ್ಟೇಅಲ್ಲಾ ಬಡಾವಣೆ ಸಂಪೂರ್ಣ ಜಲದಿಗ್ಬಂಧನವಾಗಿದೆ. ರಸ್ತೆಗಳು ಸದ್ಯ ನದಿಯಂತಾಗಿದ್ದು, ಜನರು ಬೋಟ್‌ಗಳನ್ನ ಬಳಿಸಿಕೊಂಡು ರಸ್ತೆಗಳನ್ನ ದಾಟುತ್ತಿದ್ದಾರೆ.

Also Read: Karnataka Rain: ಸಿಲಿಕಾನ್‌ ಸಿಟಿಯಲ್ಲಿ ಮಳೆಯೋ.. ಮಳೆ ; ಹವಮಾನ ಇಲಾಖೆಯಿಂದ ಹೈ ಅಲರ್ಟ್‌..!

ಅಲ್ಲದೇ ಸ್ಥಳಕ್ಕೆ ಅಗ್ನಿಶಾಮಕ ದಳದ ಡಿಐಜಿ ರವಿ ಚನ್ನಣನವರ್ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಅಗ್ನಿ ಶಾಮಕ‌ದಳ, SDRF ಅಧಿಕಾರಿಗಳು, ಸಿಬ್ಬಂದಿಗಳು ಸಾಯಿ ಲೇಔಟ್ ಜನರಿಗೆ ಮೈಕ್ ಮೂಲಕ ಅನೌನ್ಸ್ ಮಾಡಿ ಧೈರ್ಯ ತುಂಬಿದ್ದಾರೆ. ಯಾರೂ ಆತಂಕ ಪಡಬೇಡಿ, ಎಲ್ಲರನ್ನೂ ರಕ್ಷಣೆ ಮಾಡ್ತೀವಿ. ಊಟದ ವ್ಯವಸ್ಥೆ ಮಾಡ್ತೀವೆಂದು ಅನೌನ್ಸ್ ಮಾಡಿದ್ದಾರೆ. ಇನ್ನು ಭರ್ಜರಿ ಮಳೆಗೆ ರಸ್ತೆನಾ..?ನದಿನಾ ಅನ್ನೋ ಪರಿಸ್ಥಿತಿ ಸದ್ಯ ನಗರದಲ್ಲಿ ನಿರ್ಮಾಣವಾಗಿದೆ.

Share.
Leave A Reply