Site icon BosstvKannada

ಜುಲೈನಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ 3 ದಿನಗಳವರೆಗೆ ಓಪನ್!

ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಜಾತಿ ಧರ್ಮ ಎನ್ನದೇ ಅಯ್ಯಪ್ಪಸ್ವಾಮಿ ಮೊರೆ ಹೋಗುವವರು ದೇಶದಲ್ಲಿ ಅನೇಕ ಸಂಖ್ಯೆಯಲ್ಲಿದ್ದಾರೆ. ಮಕರ ಸಂಕ್ರಾಂತಿಯಂದು ಜ್ಯೋತಿಯನ್ನ ನೋಡಲೆಂದೇ ಲಕ್ಷಾಂತರ ಜನರು ಬರುತ್ತಾರೆ. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳನ್ನ ಹೊಂದಿರುವ ಶಬರಿಮಲೆ ದೇವಸ್ಥಾನದ ಇತಿಹಾಸದಲ್ಲಿ ಅಪರೂಪ ಎನ್ನುವಂತೆ 3 ಬಾರಿ ದೇವಾಲಯ ವಿವಿಧ ಕಾರಣಕ್ಕಾಗಿ ತೆರೆಯಲಿದೆ.

ಜುಲೈ ತಿಂಗಳಲ್ಲಿ 3 ಬಾರಿಯಂತೆ ಒಟ್ಟು 11 ದಿನಗಳ ಕಾಲ ಪೂಜೆ ನಡೆಯಲಿದೆ. 8 ದಿನ ಮಾತ್ರ ಅಯ್ಯಪ್ಪಸ್ವಾಮಿ ದೇವಾಲಯ ಓಪನ್ ಇರಲಿದೆ. ಜುಲೈ 11 ರಿಂದ 13ರರ ವರೆಗೆ ನವಗ್ರಹದ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಜುಲೈ 16 ರಿಂದ 21ರವರೆಗೆ ಕರ್ಕಾಟಕ ಮಾಸ ಪೂಜೆ ನಡೆಯುತ್ತದೆ. ಜುಲೈ 29, 30 ನಿರಪುತ್ತರಿ ಸೇವೆ ಇದ್ದು, ರಾತ್ರಿ 10 ಗಂಟೆಗೆ ದೇವಸ್ಥಾನ ಮುಚ್ಚಲಿದೆ. ಇದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ದೇವರ ದರ್ಶನ ಪಡೆಯಲು ವರ್ಚುವಲ್ ಕ್ಯೂ ಬುಕ್ಕಿಂಗ್ ಮೂಲಕ ನೋಂದಣಿ ಮಾಡಿಸಿಕೋಳ್ಳಬೇಕು ಅಂತಾ ಆಡಳಿತ ಮಂಡಳಿ ತಿಳಿಸಿದೆ. ವರ್ಷದ ನವೆಂಬರ್ – ಜನವರಿಯ ಸಮಯದಲ್ಲಿ ಮಂಡಲಪೂಜೆ ಮಹೋತ್ಸವ, ಮಕರವಿಳಕ್ಕು ಉತ್ಸವ ಮತ್ತು ಮಕರ ವಿಳಕ್ಕು ಸಮಯದಲ್ಲಿ ದೇವಾಲಯದ ಬಾಗಿಲು ತೆರೆದಿರುತ್ತದೆ. ಈ ಬಾರಿ ಇದೇ ತಿಂಗಳು ಅಂದರೆ ಜುಲೈನಲ್ಲಿ ಒಟ್ಟು 3 ಬಾರಿ ದೇವಾಲಯ ತೆರಲಿದೆ. ಇದು, ತೀರಾ ಅಪರೂಪದ ವಿದ್ಯಮಾನ ಅಂತಾ ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version