ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಪ್ರವಾಸ ಕೈಗೊಂಡಿದ್ದು, ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಕಲವು ಒಪ್ಪಂದಗಳನ್ನು ಭಾರತದೊಂದಿಗೆ ಮಾಡಿಕೊಳ್ಳಲಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2 ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಯನ್ನು ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಭಾರತದೊಂದಿಗೆ ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳಲು ಹಾಗೂ ಜಾರಿಗೆ ತರಲು ರಷ್ಯಾ ಸಂಸತ್ತು ಒಪ್ಪಿಗೆ ನೀಡಿದೆ. ಹೀಗಾಗಿ ಅದು ರಷ್ಯಾ ಹಾಗೂ ಭಾರತದ ಹಲವು ವಿರೋಧಿ ರಾಷ್ಟ್ರಗಳ ಹೊಟ್ಟೆ ಉರಿಗೆ ಕಾರಣವಾಗುತ್ತಿದೆ.
ರಷ್ಯಾ ಮತ್ತು ಭಾರತದ ಸಂಬಂಧ ಹಾಳು ಮಾಡುವುದಕ್ಕಾಗಿ ಹಲವಾರು ರಾಷ್ಟ್ರಗಳು ಯತ್ನ ಮಾಡಿದವು. ಆದರೆ, ಅದು ವಿಫಲವಾಯಿತು. ಈ ಸಮಯದಲ್ಲೇ ಪುಟಿನ್, ಭಾರತದ ಪ್ರವಾಸ ಕೈಗೊಂಡಿದ್ದು, ಹಲವರ ಕಣ್ಣು ಕೆಂಪಾಗಿಸಿದೆ.
ವ್ಲಾಡಿಮಿರ್ ಪುಟಿನ್ (Vladimir Putin) ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಲಿದೆ. ಹೀಗಾಗಿ 5 ಸ್ತರದ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿದೆ.
50ಕ್ಕೂ ಹೆಚ್ಚು ರಷ್ಯಾದ ಭದ್ರತಾ ಸಿಬ್ಬಂದಿ ಕೂಡ ಈಗಾಗಲೇ ದೆಹಲಿಗೆ ಬಂದಿದೆ. ಪುಟಿನ್ ಅವರ ಭದ್ರತೆಯ ಹೊಣೆಯನ್ನು ಪ್ರೆಸಿಡೆನ್ಶಿಯಲ್ ಸೆಕ್ಯೂರಿಟಿ ಸರ್ವಿಸ್(SBP) ವಹಿಸಿಕೊಳ್ಳುತ್ತದೆ. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಕಮಾಂಡೋಗಳು, ದೆಹಲಿ ಪೊಲೀಸರು ಇರಲಿದ್ದಾರೆ. ಪುಟಿನ್ ಮತ್ತು ಮೋದಿ (Narendra Modi) ಭೇಟಿ ವೇಳೆ ಮಾತ್ರ ಭಾರತದ ಎನ್‌ಎಸ್‌ಜಿ ಕಮಾಂಡೊಗಳು ರಷ್ಯಾ ಭದ್ರತಾ ಅಧಿಕಾರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

