ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ರಾಜ್ಯದಲ್ಲಿ ಕೊರೋನಾ ಸೋಂಕಿನ ಬಗ್ಗೆ ಅಪ್ಡೇಟ್ಗಳನ್ನು ನೀಡಿದರು. ರಾಜ್ಯದಲ್ಲಿ ಒಟ್ಟು 47 ಸಕ್ರಿಯ ಸೋಂಕಿತರಿದ್ದಾರೆ, ಆದರೆ ಯಾರೂ ಆಕ್ಸಿಜನ್ ಮೇಲಾಗಲೀ, ವೆಂಟಿಲೇಟರ್ ಮೇಲಾಗಲಿ ಇಲ್ಲ, ಗಂಭೀರ ಸ್ವರೂಪದ ಸೋಂಕಿನಿಂದ ಯಾರೂ ಬಳಲುತ್ತಿಲ್ಲ ಅನ್ನೋದು ಗೊತ್ತಾಗಿದೆ ಮತ್ತು ಸೋಂಕಿತರನ್ನು ಅವರವರ ಮನೆಯಲ್ಲಿ ಐಸೋಲೇಷನ್ನಲ್ಲಿ ಇಡಲಾಗಿದೆ ಎಂದು ಹೇಳಿದರು.
ಇಂದಿನಿಂದ RTPCR ಕಿಟ್ ಗಳು ಪೊರೈಕೆ ಆಗುತ್ತಿವೆ. ವಿನಾಕಾರಣ ಟೆಸ್ಟ್ ಗಳನ್ನು ಮಾಡಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತೇವೆ. ಆದಷ್ಟು ಜನರು ಸಹ ಸಹಕಾರ ಕೊಡಬೇಕು. ಪ್ರಕರಣ ಹೆಚ್ಚಾದ್ರೆ ಮಾತ್ರ ಕೋವಿಡ್ ವಾರ್ಡ್ ಸ್ಥಾಪನೆ ಮಾಡ್ತೇವೆ. ಪೂರ್ವ ತಯಾರಿಗಾಗಿ ವಾರ್ಡ್ ಸ್ಥಾಪಿಸ್ತಿದ್ದೇವೆ. ಸದ್ಯಕ್ಕೆ ಯಾರು ಆತಂಕ ಪಡಬಾರದು ಅಂತಾ ಹೇಳಿದ್ರು. ಇನ್ನು ಜನ ಸಹ ಎಚ್ಚರಿಕೆಯಿಂದ ಇರಬೇಕು ಎಂದರು.
ವಯಸ್ಸಾದವರು,ಗರ್ಭಿಣಿ,ಬಾಣಂತಿಯರು ಮಾಸ್ಕ್ ಧರಿಸಿದರೆ ಉತ್ತಮ. ಶಾಲಾ, ಕಾಲೇಜು ಬಂದ್ ಮಾಡುವ ಪರಿಸ್ಥಿತಿ ಇಲ್ಲ. ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ. ಆದರೆ ತಯಾರಿ ಮಾಡಿಕೊಳ್ಳಿ ಎಂದಿದ್ದಾರೆ.ಮಾಸ್ಕ್ ಕಡ್ಡಾಯ ಮಾಡೋಕೆ ಆಗಲ್ಲ. ಆದರೆ ಜನ ಹಾಕಿದರೆ ಒಳ್ಳಯದೇ ಅಲ್ವೇ? ಎಂದರು.
Also Read: ಶೀಘ್ರದಲ್ಲೇ ರಾಜನಾಥ್ ಸಿಂಗ್ ಭೇಟಿ, ಡಿಫೆನ್ಸ್ ಕಾರಿಡಾರ್‌ಗೆ ಆಗ್ರಹ : M.B. Patil
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ಬಗ್ಗೆ ಮಾತನಾಡಿ, ಇಂದು ಮಂಗಳೂರು ಡಿಸಿ ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡ್ತೇನೆ. NDRF ತಂಡ ದಕ್ಷಿಣ ಕನ್ನಡಕ್ಕೆ ಆಗಮಿಸಿದೆ. ಗುಡ್ಡುಗಾಡು ಪ್ರದೇಶದ ಜನರ ರಕ್ಷಣೆಗೆ ಸಿದ್ಧತೆ ನಡೆಸಿದೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ Dinesh Gundu Rao ಹೇಳಿದ್ದಾರೆ.

