ಫುಟ್‌ಬಾಲ್ ಜಗತ್ತಿನ ಲೆಜೆಂಡ್ರಿ ಆಟಗಾರ ಹಾಗೂ ನಾಲ್ಕು ಮಕ್ಕಳ ತಂದೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಈಗ ಎಂಗೆಜ್‌ಮ್ಮೇಂಟ್ ಆಗಿದೆ. ಯೆಸ್, ನೀವು ಸರಿಯಾಗೇ ಕೇಳಿದ್ದೀರಾ? ಜಗತ್ಪ್ರಸಿದ್ಧ ಫುಟ್‌ಬಾಲ್‌ರ ರೊನಾಲ್ಡೊ ತಮ್ಮ ಧೀರ್ಘಕಾಲದ ಗರ್ಲ್‌ಫ್ರೆಂಡ್ ಜಾರ್ಜಿನಾ ರಾಡ್ರಿಗಸ್ ಜೊತೆ ಎಂಗೆಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಫೋಟೊವನ್ನ ಜಾರ್ಜಿನಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ರೊನಾಲ್ಡೊರನ್ನ ಟ್ಯಾಗ್ ಮಾಡಿದ್ದಾರೆ.

ರೊನಾಲ್ಡೊ ಜಾರ್ಜಿನಾ ಒಂದು ದಶಕದಿಂದ ಡೇಟಿಂಗ್ ಮಾಡುತ್ತಿದ್ದು, ಮದುವೆಯಾಗದೇನೆ ನಾಲ್ಕು ಮಕ್ಕಳನ್ನ ಪಡೆದಿದ್ದಾರೆ. ಆದ್ರೀಗ ಲೀವ್ ಇನ್ ರಿಲೇಷನ್‌ಶಿಪ್ ಬಿಟ್ಟು, ಮದ್ವೆಗೆ ರೆಡಿಯಾಗಿದ್ದು ಇಬ್ಬರು ಎಂಗೆಜ್‌ಮೆಂಟ್ ಆಗಿದ್ದಾರೆ. ಈ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಜಾರ್ಜಿನಾ ಶೇರ್ ಮಾಡಿಕೊಂಡ ಫೋಟೋ ವೈರಲ್ ಆಗಿವೆ.
ಜಾರ್ಜಿನಾ ತಮ್ಮ ಕೈ ಮತ್ತು ರೊನಾಲ್ಕೂ ಕೈಯ ಚಿತ್ರವನ್ನು ಹಂಚಿಕೊಂಡು ಹೌದು ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತಾ ಕ್ಯಾಪ್ಶನ್ ಬರೆದಿದ್ದಾರೆ. ಡೈಮಂಡ್ ರಿಂಗ್ ಹಾಕಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ಸಖತ್ ವೈರಲ್ ಆಗಿದೆ. ರೊನಾಲ್ಡ್ ಮತ್ತು ಜಾರ್ಜಿನಾ 9 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ 2017 ರ ಆರಂಭದಲ್ಲಿ ತಮ್ಮ ಸಂಬಂಧವನ್ನು ದೃಢಪಡಿಸಿದರು. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ರೊನಾಲ್ಲೊ ಮತ್ತು ಜಾರ್ಜಿನಾಗೆ 4 ಮಕ್ಕಳಿದ್ದಾರೆ. ಅವರ ಇಬ್ಬರು ಮಕ್ಕಳಾದ ಅವಾ ಮಾರಿಯಾ ಮತ್ತು ಮಾಟಿಯಾ 2017 ರಲ್ಲಿ ಜನಿಸಿದರು. ಇದರ ನಂತರ, 2022 ರಲ್ಲಿ, ಜಾರ್ಜಿನಾ ಬೆಲ್ಲಾ ಎಸ್ಮರಾಲ್ಯಾಗೆ ಜನ್ಮ ನೀಡಿದರು. ಇದರ ಜೊತೆಗೆ, ರೊನಾಲೊಗೆ ಒಬ್ಬ ಮಗನೂ ಇದ್ದಾನೆ. ಅವರ ಹೆಸರು ಕ್ರಿಸ್ಟಿಯಾನೊ ರೊನಾಲ್ಡ್ ಜೂನಿಯರ್, ಅವರು 2010 ರಲ್ಲಿ ಜನಿಸಿದರು. ಜಾರ್ಜಿನಾ ಪ್ರಸ್ತುತ ಎಲ್ಲಾ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.