ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಎಲಿಮಿನೇಟ್ ಆಗಬೇಕಿದ್ದ ರಿಷಾ ಸೇಫ್ ಆಗಿ ಚಂದ್ರ ಪ್ರಭ ಎಲಿಮಿನೇಟ್ ಆಗಿದ್ದಾರೆ. ಹೌದು.. ಬಿಗ್‌ಬಾಸ್ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. 6 ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ಟಾಸ್ಕ್‌ಗಳಲ್ಲಿ ಸರಿಯಾಗಿ ಪ್ರದರ್ಶನ ತೋರದೇ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿ ಹೊರಬಂದಿದ್ದಾರೆ.

ಇನ್ನು, ಕಿಚ್ಚ ಸುದೀಪ್ ಅವರೇ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದರು. ವಾರದ ಮಧ್ಯೆ ಮನೆಯಿಂದ ಬಂದಿದ್ದ ಲೆಟರ್ ಪಡೆಯುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೆಲವರು ಎಲಿಮಿನೇಷನ್ನಿಂದ ಪಾರಾಗಿದ್ದರು. ಕೊನೆಯಲ್ಲಿ ಈ ವಾರ ಬಿಗ್‌ಬಾಸ್ ಮನೆಯಲ್ಲಿ 10 ಮಂದಿ ನಾಮಿನೇಟ್ ಆಗಿದ್ದರು.. ಅವರಲ್ಲಿ ಚಂದ್ರಪ್ರಭ ಕೂಡ ಒಬ್ಬರಾಗಿದ್ದರು. ಕಾಕ್ರೋಚ್ ಸುಧಿ, ಧ್ರುವಂತ್, ಗಿಲ್ಲಿ ನಟ, ಸೂರಜ್ ಸಿಂಗ್, ಅಶ್ವಿನಿಗೌಡ, ಚಂದ್ರಪ್ರಭ, ರಾಶಿಕಾ ಶೆಟ್ಟಿ, ಧನುಷ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ ಅವರು ನಾಮಿನೇಟ್ ಆಗಿದ್ದರು. ಸುದೀಪ್ ಅವರು ವೋಟ್ ಪ್ರಕಾರ, ಒಬ್ಬೊಬ್ಬರನ್ನೇ ಸೇವ್ ಮಾಡುತ್ತ ಬಂದರು. ಕೊನೆಯಲ್ಲಿ ಕಾಕ್ರೋಚ್ ಸುಧೀ, ಚಂದ್ರಪ್ರಭ ಉಳಿದುಕೊಂಡಿದ್ದರು. ಈ ವೇಳೆ ಕಾಕ್ರೋಚ್ ಸುಧಿ ತಮಗೆ ಸಿಕ್ಕಿರುವ ಸ್ಪೆಷಲ್ ಪವರ್ ಬಳಸಿಕೊಂಡು ಸೇವ್ ಆದರು. ಆದರೆ ಕೊನೆಯಲ್ಲಿ ಚಂದ್ರಪ್ರಭ ಮನೆಯಿಂದ ಹೊರ ಬರಬೇಕಾಯಿತು.
ಇನ್ನು ಮ್ಯಾನ್ ಹ್ಯಾಂಡ್ಲಿಂಗ್ ವಿಚಾರದಲ್ಲಿ ಸಿಲುಕಿದ್ದ ರಿಷಾ, ಅದೃಷ್ಟವಶಾತ್ ಸೇವ್ ಆಗಿದ್ದಾರೆ. ದೊಡ್ಮನೆಯ ಸ್ಪರ್ಧಿಗಳು ಒಮ್ಮತ ನಿರ್ಧಾರ ಮಾಡಿ, ರಿಷಾ ಅವರನ್ನು ಸೇಫ್ ಮಾಡಿದ್ದಾರೆ. ಗಿಲ್ಲಿಗೆ ಹೊಡೆದಿದ್ದ ವಿಚಾರದಲ್ಲಿ ದೊಡ್ಮನೆ ಸದಸ್ಯರೆಲ್ಲಾ ಸೇರಿ ಒಮ್ಮೆ ವಾರ್ನ್ ಮಾಡಿ ಜೀವದಾನ ಕೊಡಿ ಎಂದು ಎಲ್ಲೋ ಕಾರ್ಡ್ ಅನ್ನು ಬಹುತೇಕರು ಪ್ಲೇ ಮಾಡಿದ್ರಿಂದ ರಿಷಾ ಸೇಫ್ ಆಗಿದ್ದಾರೆ. ಇದೇ ವೇಳೆ, ಕಿಚ್ಚ ಕೂಡ ಗಿಲ್ಲಿ ಹಾಗೂ ರಿಷಾಗೆ, ಇನ್ನೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಇಂಥಾ ಘಟನೆಗಳು ನಡೆಯಕೂಡದು ಅಂತಾ ಖಡಕ್ ವಾರ್ನ್ ಮಾಡಿದ್ದಾರೆ..
ಇನ್ನು, ಎಲಿಮಿನೇಟ್ ಆಗಿರುವ ಚಂದ್ರಪ್ರಭಗೆ ಭರ್ಜರಿ ಸಂಭಾವನೆ ಸಿಕ್ಕಿದೆ. ದೊಡ್ಮನೆಯಿಂದ ಎಲಿಮಿನೇಟ್ ಆಗಿ ಕಿಚ್ಚನ ಮುಂದೆ ಬರ್ತಿದ್ದಂತೆ ಚಂದ್ರ ಪ್ರಭ ಕಣ್ಣೀರಿಟ್ಟರು. ಈ ವೇಳೆ, ಸಮಾಧಾನ ಪಡಿಸಿದ ಕಿಚ್ಚ ಸರ್‌ಪ್ರೈಸ್ ಗಿಫ್ಟ್ ನೀಡಿದರು. 50 ಸಾವಿರ ರೂಪಾಯಿಯ ಒಂದು ಚೆಕ್ ಹಾಗೂ 1 ಲಕ್ಷ ರೂಪಾಯಿಯ ಮತ್ತೊಂದು ಚೆಕ್ ಹಸ್ತಾಂತರಿಸಿದರು.. ಅಂದ್ರೆ ಒಟ್ಟು ಒಂದೂವರೆ ಲಕ್ಷ ರೂಪಾಯಿ ಗಿಫ್ಟ್ ಪಡೆದಿದ್ದಾರೆ.