Site icon BosstvKannada

ರೇಣುಕಾಸ್ವಾಮಿ ಪ್ರಕರಣ : ಸುಪ್ರೀಂ ಕೋರ್ಟ್‌ಗೆ ಕಪಿಲ್‌ ಸಿಬಲ್‌ ಗೈರು, ದರ್ಶನ್‌ ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ಜಾಮೀನು ರದ್ದುಗೊಳಿಸಲು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬೇಕಾಗಿತ್ತು. ಆದರೆ ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಗೈರಾಗಿದ್ದಾರೆ. ಹೀಗಾಗಿ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಲಾಗಿದೆ.

ದರ್ಶನ್ ಮತ್ತು ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ನಿಂದ ಜಾಮೀನು ಮಂಜೂರಾಗಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಪೊಲೀಸ್‌ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಆದೇಶ ಪ್ರಶ್ನಿಸಿ ಅಪೀಲ್ ಸಲ್ಲಿಸಲಾಗಿದೆ. ಇಂದು ವಿಚಾರಣೆ ಆರಂಭವಾದ ಬಳಿಕ, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ಆ‌ರ್. ಮಹದೇವನ್ ಅವರಿದ್ದ ಪೀಠ, ಪ್ರತಿಪಕ್ಷ ವಕೀಲರಿಗೆ ಲಿಖಿತ ವಾದ ಮಂಡನೆ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ ನೀಡಿತು.

ಬಳಿಕ ದರ್ಶನ್ ಪರ ವಕೀಲರಾದ ಸಿದ್ದಾರ್ಥ್ ಧವೆ ಅವರು, ನಾವು ಬಂಧನದ ಕಾರಣಗಳ ಕುರಿತು ವಾದಿಸುತ್ತಿಲ್ಲ. ಕೇಸ್‌ನ ಮೆರಿಟ್‌ಗಳನ್ನೇ ನಾವೀಗ ಕೋರ್ಟ್ ಮುಂದೆ ಮಂಡಿಸುತ್ತಿದ್ದೇವೆ ಎಂದು ಹೇಳಿದರು. ಆದರೆ ಕಪಿಲ್ ಸಿಬಲ್ ಗೈರಾದ ಕಾರಣ, ಹೆಚ್ಚಿನ ಸಮಯ ಕೋರಿ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಲಾಗಿದೆ. ಜಾಮೀನು ರದ್ದುಗೊಳಿಸುವ ಬಗ್ಗೆ ತೀರ್ಮಾನವಾಗುವ ನಿರೀಕ್ಷೆ ಇದೆ. ಒಂದ್ವೇಳೆ ಜಾಮೀನು ರದ್ದಾದರೆ, ನಟ ದರ್ಶನ್ ಸೇರಿದಂತೆ A1 ಪವಿತ್ರ, A2 ದರ್ಶನ್ ಸೇರಿ ಒಟ್ಟು 7 ಮಂದಿ ಆರೋಪಿಗಳು ಮತ್ತೆ ಜೈಲು ಸೇರಬೇಕಾಗುತ್ತದೆ.

Exit mobile version