Site icon BosstvKannada

Remedies For Anti Aging : ಸುಕ್ಕು, ನೆರಿಗೆಗೆ ಬೆಸ್ಟ್‌ ರೆಮಿಡಿ, ನೀವು ಟ್ರೈ ಮಾಡಿ..!

ಬಹುಶಃ ಆಲೂಗಡ್ಡೆಯನ್ನ ಇಷ್ಟ ಪಡದವರು ಬಹಳ ಕಡಿಮೆ. ಸಿಂಪಲ್‌ ಪಲ್ಯದಿಂದ ಹಿಡಿದು ಫ್ರೆಂಚ್‌ಫ್ರೈಸ್‌ವರೆಗೆ ನಾನಾ ಅವತಾರಗಳನ್ನ ಹೊಂದಿರೋ ಈ ಆಲೂಗಡ್ಡೆಯನ್ನ ಕೇವಲ ಅಡುಗೆಗಳಲ್ಲಿ ಮಾತ್ರವಲ್ಲ ಬ್ಯೂಟಿ ರೆಮಿಡೀಸ್‌ಗಳಲ್ಲಿ ಕೂಡ ಬಳಸಲಾಗುತ್ತೆ.

ಮುಖದ ಸುಕ್ಕುಗಳನ್ನು(Remedies For Anti Aging) ಹೋಗಲಾಡಿಸಲು ಆಲೂಗಡ್ಡೆ ರಸವನ್ನು ಜೇನುತುಪ್ಪ ದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬಟ್ಟೆಯ ಸಹಾಯದಿಂದ ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಮುಖವನ್ನು ತೊಳೆಯಿರಿ. ಪ್ರತಿಯೊಬ್ಬ ಪುರುಷ ಅಥವಾ ಮಹಿಳೆ ತಮ್ಮ ಚರ್ಮವು ಯಾವಾಗಲೂ ಹೊಳೆಯುವ ಮತ್ತು ಯೌವನದಿಂದ ಕಾಣಬೇಕೆಂದು ಬಯಸುತ್ತಾರೆ.

ಆದ್ರೆ ಕ್ರಮೇಣ ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸುಕ್ಕು ನೆರಿಗೆಗಳು ಕಾಣಿಸಿಕೊಳ್ತಿದಂತೆ ಕೆಲವರು ಬೋಟೋಕ್ಸ್‌ ಮೊರೆ ಹೋಗ್ತಾರೆ. ಅದರ ಬದ್ಲು, ಎರಡು ಚಮಚ ಆಲೂಗಡ್ಡೆ ರಸ, ಒಂದು ಚಮಚ ಗ್ಲಿಸರಿನ್‌ ಹಾಗೂ ಒಂದು ಚಮಚ ಹಾಲನ್ನ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ.

ಇದನ್ನ ಬೇಕಿದ್ರೆ ನೀವು ಪ್ರತಿದಿನ ಮಾಡ್ಬೋದು ಅಥವಾ ವಾರದಲ್ಲಿ ಎರಡು ಬಾರಿ ಮಾಡಿ. ಹದಿನೈದು ನಿಮಿಷಗಳ ನಂತ್ರ ಮುಖ ತೊಳೆಯಿರಿ.

Exit mobile version