ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಒಂದು ಮಹತ್ವದ ದಾಖಲೆಯನ್ನು RCB ಬ್ರೇಕ್‌ ಮಾಡಿದೆ. ಆ ಮೂಲಕ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಆ ರೆಕಾರ್ಡ್‌ ಏನು ಅಂತ ಹೇಳ್ತೀವಿ ಅದಕ್ಕೂ ಮೊದಲು ಬಾಸ್‌ ಟಿವಿ ಕನ್ನಡ ಚಾನಲ್‌ ಅನ್ನ ಸಬ್‌ಸ್ಕ್ರೈಬ್‌ ಮಾಡಿ.

ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿತು. ಪಿಬಿಕೆಎಸ್‌ ನೀಡಿದ 102 ರನ್‌ಗಳ ಸಾಧಾರಣ ಗುರಿಯನ್ನು RCB 10 ಓವರ್‌ನಲ್ಲೇ ತಲುಪಿತು. ಇನ್ನೂ 60 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿ ಆರ್‌ಸಿಬಿ ಗೆದ್ದು ಬೀಗಿತು.

60 ಎಸೆತಗಳ ಭಾರಿ ಅಂತರದ ಗೆಲುವು, ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ಬೆನ್ನಟ್ಟುವಾಗ ಸಾಧಿಸಿದ ಅತಿದೊಡ್ಡ ಜಯ ಅಂತರವಾಗಿದೆ. 2024 ರ ಐಪಿಎಲ್ ಫೈನಲ್‌ನಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಕೆಕೆಆರ್ 57 ಎಸೆತಗಳ ಅಂತರದಲ್ಲಿ ಗುರಿ ಮುಟ್ಟಿ ಗೆದ್ದಿತ್ತು. ಆ ದಾಖಲೆಯನ್ನು ಆರ್‌ಸಿಬಿ ಮುರಿದಿದೆ.

ಐಪಿಎಲ್ 2025 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಸ್ಥಾನ ಪಡೆದುಕೊಂಡಿದೆ. ನಿನ್ನೆ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ರಜತ್ ಪಾಟಿದಾರ್ ಟಾಸ್ ಗೆದ್ದು ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ನಂತರ ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು 14.1 ಓವರ್‌ಗಳಲ್ಲಿ ಒಟ್ಟು 101 ರನ್‌ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.

Also Read: ಯುವ ಆಟಗಾರನಿಗೆ Kohli ಅವಮಾನ? ಕಿಂಗ್‌ ವಿರುದ್ಧ ಸಿಡಿದೆದ್ದ ನೆಟಿಜೆನ್ಸ್!‌

ಗುರಿ ಬೆನ್ನತ್ತಿದ ಆರ್‌ಸಿಬಿ ಫಿಲ್‌ ಸಾಲ್ಟ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಜಯದ ನಗೆ ಬೀರಿತು. ಈ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್‌ ಫೈನಲ್‌ ಪ್ರವೇಶ ಮಾಡಿದೆ.

Share.
Leave A Reply