Site icon BosstvKannada

Bengaluru stampede : RCB ಫ್ರ್ಯಾಂಚೈಸಿ, KSCA ಹಾಗೂ ಡಿಎನ್‌ಎ ಮ್ಯಾನೇಜ್‌ಮೆಂಟ್ ವಿರುದ್ಧ FIR

18 ವರ್ಷಗಳ ಕಪ್‌ ಗೆದ್ದ ಸಂಭ್ರಮದಲ್ಲಿದ್ದ ರಾಜ್ಯಕ್ಕೆ ನಿನ್ನೆ ಬರಸಿಡಿಲೆ ಬಡಿದಂತಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ (Bengaluru stampede) ಸಂಬಂಧಿಸಿದಂತೆ, ಕೊನೆಗೂ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಕಾಲ್ತುಳಿತ ಪ್ರಕರಣದ ಯುಡಿಆರ್ ಬದಲು ಎಫ್‌ಐಆರ್ ದಾಖಲಿಸಿಕೊಂಡಿದೆ. RCB ಫ್ರ್ಯಾಂಚೈಸಿ, KSCA ಹಾಗೂ ಡಿಎನ್‌ಎ ಮ್ಯಾನೇಜ್‌ಮೆಂಟ್ ವಿರುದ್ಧ FIR ದಾಖಲಿಸಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, BNS ಕಾಯ್ದೆ 106 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ನೆಗ್ಲಿಜೆನ್ಸ್ ಅಡಿಯಲ್ಲಿ ಕೂಡ ಎಫ್.ಐ.ಆರ್ ದಾಖಲು ಮಾಡಿಕೊಂಡಿದ್ದಾರೆ. ಇದೇ ಘಟನೆಗೆ ಸಂಬಂಧಿ ಸಿದಂತೆ ಜೂನ್ 4 ರಂದು ಪೊಲೀಸರು ಯುಡಿಆರ್ ದಾಖಲಿಸಿದ್ದರು.. ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿರುವ ಸಂಬಂಧ ಪೊಲೀಸರು ಅಸಹಜ ಸಾವು (ಯುಡಿಆರ್ ) ಎಂದು ದೂರು ದಾಖಲಿಸಿಕೊಂಡಿದ್ದರು. ಆದ್ರೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ 195 ಅಡಿಯಲ್ಲಿ ಸದ್ಯ ಪ್ರಕರಣ ದಾಖಲಾಗಿದೆ..

Exit mobile version