Site icon BosstvKannada

RCB ಸಾವು ನೋವಿಗೆ ಅಸಲಿ ಕಾರಣವೇನು?

ನಿನ್ನೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಇತಿಹಾಸ ಸೃಷ್ಟಿಸಿತ್ತು.. ಇಡೀ ರಾಜ್ಯದಲ್ಲಿ ಸಂಭ್ರಮ ಮನೆ ಮಾಡಿತ್ತು.. ಆರ್‌ಸಿಬಿ ಗೆಲುವಿನ ವಿಜಯೋತ್ಸವನ್ನ ಸಂಭ್ರಮಿಸಲು ಇಂದು ಆರ್‌ಸಿಬಿ ಫ್ಯಾನ್ಸ್‌ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಿಕ್ಕಿರಿದು ಸೇರಿದ್ರು.. ಹಬ್ಬದ ವಾತಾವರಣವಿದ್ದ ಕರುನಾಡಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.. ಹೌದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವು, ನೋವಿನ ಸಂಖ್ಯೆ ಏರಿಕೆ ಆಗುತ್ತಿದೆ. ಕಾಲ್ತುಳಿತಕ್ಕೆ ಸದ್ಯ ೧೧ ಜನ ಬಲಿಯಾಗಿದ್ದಾರೆ.. ಹಲವರು ಜೀವನ್ಮರಣ ಹೋರಾಟ ನಡೆಸ್ತಿದ್ದಾರೆ. ಏಕಾಏಕಿ ಕಾಂಕ್ರಿಟ್‌ ಚರಂಡಿ ಸ್ಲ್ಯಾಬ್‌ ಕುಸಿದಿದ್ರಿಂದ ಈ ದುರ್ಘಟನೆ ನಡೆದಿದೆ..

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಿರೀಕ್ಷೆಗೂ ಮೀರಿ ಸೇರಿದ್ದ ಆರ್‌ಸಿಬಿ ಫ್ಯಾನ್ಸ್‌ಗಳನ್ನ ನಿಯಂತ್ರಿಸಲಾಗದೆ ಇರುವುದರಿಂದ ಈ ಕಾಲ್ತುಳಿತ ಸಂಭವಿಸಿ ಅಮಾಯಕ ಜನರು ಜೀವ ತೆತ್ತಿದ್ದಾರೆ. ಇನ್ನು ಚಿನ್ನ ಸ್ವಾಮಿ ಸ್ಟೇಡಿಯಂಗೆ ಹತ್ತಾರು ಗೇಟುಗಳಿದ್ರು.. ಅದ್ರಲ್ಲಿ ಕೇವಲ ಮೂರು ಗೇಟ್‌ಗಳನ್ನ ತೆರೆಯಲು ಕೆಎಸ್‌ಇ ಹೇಳಿತ್ತು.. ಆದ್ರೆ ಸ್ಟೇಡಿಯಂ ಬಳಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಸ್ಟೇಡಿಯಂನ ಮೂರು ಗೇಟ್‌ ತೆಗೆಯುತ್ತಿದ್ದಂತೆ ಒಳಗೆ ನುಗ್ಗಿದ್ದಾರೆ.. ಈ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.. ಆದ್ರೆ ಮೂರು ಗೇಟ್‌ ಬದಲು ಹತ್ತಾರು ಗೇಟ್‌ಗಳನ್ನ ತೆಗೆದಿದ್ದಿದ್ರೆ, ಅಷ್ಟು ಜನ ಒಮ್ಮೆಲೆ ಸ್ಟೇಡಿಯಂಗೆ ನುಗ್ಗಿದ್ರು, ನೂಕು ನುಗ್ಗಲು ಉಂಟಾಗ್ತಿರ್ಲಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ.. ಇನ್ನು ಈ ಆರ್‌ಸಿಬಿ ವಿಜಯೋತ್ಸವನ್ನ ಆಚರಿಸಲು ಸರ್ಕಾರದ ಪೂರ್ವಸಿದ್ಧತೆ ಕೊರತೆ ಎದ್ದು ಕಾಣುತ್ತಿತ್ತು ಅಂತಾ ವಿಪಕ್ಷಗಳು ಕಿಡಿಕಾರಿದ್ದಾರೆ.

Exit mobile version