Site icon BosstvKannada

RCB ಬಾಯ್ಸ್ ವಿಜಯೋತ್ಸವಕ್ಕೆ ಸಿಲಿಕಾನ್‌ ಸಿಟಿ ಸಜ್ಜು.. ಮೆರವಣಿಗೆ ಎಲ್ಲಿಂದ, ಎಲ್ಲಿವರೆಗೆ?

18 ವರ್ಷಗಳ ಆರ್‌ಸಿಬಿ ಅಭಿಮಾನಿಗಳು ಕಂಡಿದ್ದ ಕನಸು ನನಸಾಗಿದೆ. ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದು ಕೊಂಡಿದೆ. ದೇಶದ್ಯಾಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಆಚರಿಸಲು ಆರ್‌ಸಿಬಿ ಇಂದು ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಆಯೋಜಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್ 3 ರಂದು ನಡೆದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ 18 ವರ್ಷಗಳ ಕಾಯುವಿಕೆಯು ಅಂತ್ಯವಾಯಿತು.

ಈ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ವಿಜಯೋತ್ಸವ ಮೆರವಣಿಗೆಯು ಇಂದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದಿಂದ ಪ್ರಾರಂಭವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಕೊನೆಗೊಳ್ಳುತ್ತದೆ. ಈ ಮೆರವಣಿಗೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಯಿದೆ. ಜೊತೆಗೆ ವಿರಾಟ್‌ ಕೊಹ್ಲಿ, ಎಬಿಡಿ ಹಾಗೂ ಕ್ರಿಸ್ ಗೇಲ್ ಕೂಡ ವಿಜಯೋತ್ಸವದಲ್ಲಿ ಇರಲಿದ್ದಾರೆ ಎನ್ನಲಾಗಿದೆ.

Exit mobile version