Site icon BosstvKannada

ಬೆಂಗಳೂರಲ್ಲಿ ಫ್ಯಾನ್ಸ್‌ ಸಂಭ್ರಮ : RCB ಆಟಗಾರ ರನ್ನು ನೋಡಲು ಫ್ಯಾನ್ಸ್‌ ಕಾತರ!

ಬೆಂಳೂರು ಚಾಲೆಂಜರ್ಸ್‌ ಸದ್ಯ ಚಾಂಪಿಯನ್ಸ್‌ ಆಗಿ ತವರಿಗೆ ಮರಳಿದ್ದಾರೆ.. ಎಲ್ಲೆಲ್ಲೂ ಆರ್‌ಸಿಬಿಯದ್ದೇ ಹವಾ.. RCB ಐಪಿಎಲ್ ಚಾಂಪಿಯನ್ ಆಗಿರುವುದರಿಂದ ಬೆಂಗಳೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ವಿಧಾನಸೌಧದಲ್ಲಿ ಸಿಎಂ ಮತ್ತು ಡಿಸಿಎಂ ಅಭಿನಂದನೆ ಸಲ್ಲಿಸಲಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭವಿದೆ. ಹೆಚ್ಚಿನ ಜನಸಂದಣಿ ಇದ್ದು, ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳನ್ನು ಬಳಸದಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲಿ ಸಂಭ್ರಮಕ್ಕೆ ಸಿದ್ಧತೆ ಆಗಿದ್ದು, ಆರ್​​ಸಿಬಿ ಅಭಿಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಆರ್​​ಸಿಬಿ ಜೆರ್ಸಿ ಧರಿಸಿ, ಫ್ಲ್ಯಾಗ್ ಹಿಡಿದು ಅಭಿಮಾನಿಗಳು ಸೇರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು, ಯುವಕರು ಆಗಮಿಸಿದ್ದು, ಆರ್​​ಸಿಬಿ ಆಟಗಾರರನ್ನು ಹತ್ತಿರದಿಂದ ನೋಡಲು ಕಾತರದಿಂದ ಕಾಯ್ತಿದ್ದಾರೆ. ಆರ್​​ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Exit mobile version